ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್: ಧೈರ್ಯ ತುಂಬಿದ ಅನುಪಮ್ ಖೇರ್

ಅಕ್ಷರ ಗಾತ್ರ

ಬೆಂಗಳೂರು: 90 ರ ದಶಕದಲ್ಲಿ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದ ನಟಿ ಮಹಿಮಾ ಚೌಧರಿ ಅವರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ.

ಹೌದು, ಈ ವಿಷಯವನ್ನು ಬಾಲಿವುಡ್ ನಟ ಅನುಪಮ್ ಖೇರ್ ಅವರು ಬಹಿರಂಗಪಡಿಸಿದ್ದು, ‘ಮಹಿಮಾ ಅವರು ನನ್ನ ರಿಯಲ್ ಹೀರೋ’ ಎಂದು ಕೊಂಡಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆಅನುಪಮ್ ಖೇರ್ ಅವರುತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.

‘ನಾನು ನನ್ನ 525 ನೇ ಚಿತ್ರ ‘ದಿ ಸಿಗ್ನೇಚರ್’ ಚಿತ್ರಕ್ಕೆ ಮಹಿಮಾ ಚೌದರಿ ಅವರನ್ನು ಮಾತನಾಡಿಸಿದಾಗ, ಅವರು ತಮಗೆ ಸ್ತನ ಕ್ಯಾನ್ಸರ್ ಇರುವುದಾಗಿ ತಿಳಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅವರು ಎಷ್ಟು ಧೈರ್ಯವಂತೆ ಎಂದು ನನಗೆ ಆಶ್ಚರ್ಯವಾಯಿತು. ಮಹಿಮಾ ಅವರು ಈ ವಿಷಯದಲ್ಲಿ ಅನೇಕ ಹೆಣ್ಣುಮಕ್ಕಳಿಗೆ ಸ್ಪೂರ್ತಿಯ ಚಿಲುಮೆ. ಮಹಿಮಾ ನೀವು ನಮ್ಮ ರಿಯಲ್ ಹೀರೋ. ನೀವು ಬೇಗ ಗುಣಮುಖರಾಗಲಿಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ'ಎಂದು ಅನುಪಮ್ ಬರೆದುಕೊಂಡಿದ್ದಾರೆ.

ಇನ್ನು ವಿಡಿಯೊದಲ್ಲಿ ಮಾತನಾಡಿರುವ ಮಹಿಮಾ ಅವರು, 'ನನಗೆ ಅನೇಕ ನಿರ್ದೇಶಕರು ಸಿನಿಮಾ ಹಾಗೂ ವೆಬ್‌ ಶೋಗಳಲ್ಲಿ ಅಭಿನಯಿಸಲುಕೇಳಿಕೊಂಡಿದ್ದರು. ಆದರೆ, ನನಗೆ ದುಃಖ ಉಮ್ಮಳಿಸುತ್ತಲೇ ಇತ್ತು. ಒಂದು ದಿನ ಅನುಪಮ್ ನನಗೆ ಸಿನಿಮಾ ವಿಷಯವಾಗಿ ಕರೆ ಮಾಡಿದ್ದಾಗ ನಾನು ನನಗೆ ಸ್ತನ ಕ್ಯಾನ್ಸರ್ ಇರುವ ಬಗ್ಗೆ ಹೇಳಿದೆ. ಅಲ್ಲದೇ ನನಗೆ ತಲೆಯಲ್ಲಿ ಕೂದಲು ಇಲ್ಲದಿರುವುದರಿಂದ ನಟನೆ ಸಾಧ್ಯವಾ? ಎಂದು ಕೇಳಿಕೊಂಡೆ. ಅನುಪಮ್ ನೀಡಿರುವ ಧೈರ್ಯ ನನ್ನನ್ನು ಮತ್ತೆ ಎದ್ದು ನಿಲ್ಲುವಂತೆ ಮಾಡಿತು’ ಎಂದಿದ್ದಾರೆ.

48 ವಯಸ್ಸಿನ ಮಹಿಮಾ ಅವರು 90 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ್ದರು. ಇತ್ತೀಚೆಗೆ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2006 ರಲ್ಲಿ ಬಾಬಿ ಮುಖರ್ಜಿ ಅವರನ್ನು ವರಿಸಿದ್ದರು. 2013 ರಲ್ಲಿ ಅವರಿಂದ ವಿಚ್ಛೇದನಪಡೆದುಕೊಂಡಿದ್ದರು. ಅವರಿಗೆ ಆರ್ಯಾನಾ ಚೌಧರಿ ಎನ್ನುವ ಮಗಳಿದ್ದಾಳೆ.

ಅನುಪಮ್ ಖೇರ್ ಅವರ ವಿಡಿಯೊ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದು, ಮಹಿಮಾ ಚೌಧರಿ ಅವರಿಗೆ ಧೈರ್ಯ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT