ಬೆಂಗಳೂರು: ಬಾಹುಬಲಿ ಸಿನಿಮಾ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ನಟ ಪ್ರಭಾಸ್ ತಮ್ಮ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾಗಳ ಮೂಲಕ ಆಗಾಗ ಸಂಪರ್ಕದಲ್ಲಿರುತ್ತಾರೆ.
ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿರುವ ಈ ನಟ ತೀರಾ ಸಕ್ರಿಯ ಅಲ್ಲದಿದ್ದರೂ ನಿಯಮಿತವಾಗಿ ಅಪ್ಡೇಟ್‌ಗಳನ್ನು ಕೊಡುತ್ತಿರುತ್ತಾರೆ.
ಆದರೆ, ಗುರುವಾರ ರಾತ್ರಿ ಅವರ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿತ್ತು. ಯಾರೊ ಕಿಡಿಗೇಡಿಗಳು ಪ್ರಭಾಸ್ ಅವರ ಅಕೌಂಟ್ ಹ್ಯಾಕ್ ಮಾಡಿ ಅದರಲ್ಲಿ ಯಾವುದೋ ವೈರಲ್ ಆದ ಫನ್ನಿ ವಿಡಿಯೊ ಒಂದನ್ನು ಪೋಸ್ಟ್ ಮಾಡಿ Human Being Unlucky ಎಂದು ಬರೆದು ಪೋಸ್ಟ್ ಮಾಡಿದ್ದರು.
ತಕ್ಷಣವೇ ಈ ವಿಷಯವನ್ನು ಅಭಿಮಾನಿಗಳು ಟ್ವಿಟರ್ ಮೂಲಕ, ಇತರೆ ಮಾರ್ಗಗಳ ಮೂಲಕ ಪ್ರಭಾಸ್ ಅವರನ್ನು ಸಂಪರ್ಕಿಸಿ ನಿಮ್ಮ ಎಫ್‌ಬಿ ಅಕೌಂಟ್ ಹ್ಯಾಕ್ ಆಗಿದೆ ಎಂದು ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಅವರು, ನನ್ನ ಎಫ್‌ಬಿ ಅಕೌಂಟ್ ಹ್ಯಾಕ್ ಆಗಿದೆ. ನನ್ನ ಗೆಳೆಯರು ಅದನ್ನು ಸರಿಪಡಿಸುತ್ತಿದ್ದಾರೆ ಎಂದು ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ಸದ್ಯ ಅವರ ಫೇಸ್‌ಬುಕ್ ಪೇಜ್ ಸರಿಯಾಗಿದೆ.
ಫೇಸ್‌ಬುಕ್‌ನಲ್ಲಿ 24 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಟಾಲಿವುಡ್ ಮೂಲದ ಈ ನಟ, ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರನ್ನು ಮಾತ್ರ ಫಾಲೋವ್ ಮಾಡುತ್ತಿದ್ದಾರೆ.
ಸೆಪ್ಟೆಂಬರ್ 28ರಂದು ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಲಾರ್ ಸಿನಿಮಾ ತೆರೆಗೆ ಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.