ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲ್ಕಿ’ಯಲ್ಲಿ ಭೈರವನಾದ ಪ್ರಭಾಸ್‌

Published 12 ಮಾರ್ಚ್ 2024, 0:03 IST
Last Updated 12 ಮಾರ್ಚ್ 2024, 0:03 IST
ಅಕ್ಷರ ಗಾತ್ರ

‘ಸಲಾರ್‌’ ಬಳಿಕ ಪ್ರಭಾಸ್‌ ನಟನೆಯ ‘ಕಲ್ಕಿ–2898 AD’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದಲ್ಲಿ ‘ಭೈರವ’ ಎಂಬ ಪಾತ್ರದಲ್ಲಿ ಪ್ರಭಾಸ್‌ ಕಾಣಿಸಿಕೊಳ್ಳಲಿದ್ದಾರೆ. 

ಬಹುತಾರಾಗಣದಲ್ಲಿ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಈಗಾಗಲೇ ಪೋಸ್ಟರ್‌ಗಳ ಮೂಲಕವೇ ಅಭಿಮಾನಿಗಳಲ್ಲಿ, ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದಲ್ಲಿ ಪ್ರಭಾಸ್‌ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಚಿತ್ರತಂಡ ಈಗಾಗಲೇ ರಿವೀಲ್‌ ಮಾಡಿದೆ. ಶಿವರಾತ್ರಿಯಂದು ನಾಯಕನ ಹೆಸರನ್ನು ಚಿತ್ರತಂಡ ಪೋಸ್ಟರ್‌ ಮೂಲಕ ತಿಳಿಸಿದೆ. ಈ ಮೂಲಕ ಚಿತ್ರದಲ್ಲಿ ಪ್ರಭಾಸ್‌ ಪಾತ್ರದ ಹೆಸರೇನು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಪ್ರಭಾಸ್‌ ‘ಭೈರವ’ನಾಗಿ ತೆರೆ ಮೇಲೆ  ಕಾಣಿಸಿಕೊಳ್ಳಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ನಾಗ ಅಶ್ವಿನ್‌ ನಿರ್ದೇಶನ ಮಾಡುತ್ತಿದ್ದಾರೆ.

ವೈಜಯಂತಿ ಮೂವೀಸ್‌ ನಿರ್ಮಾಣ ಮಾಡಿರುವ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಇಟಲಿಯಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿತ್ತು. ಸಿನಿಮಾ ಮೇ 9ರಂದು ಬಿಡುಗಡೆಯಾಗುತ್ತಿದ್ದು, ಪ್ರಭಾಸ್‌ ಜೊತೆಗೆ ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮೂಲ ತೆಲುಗು ಸೇರಿ ಕನ್ನಡ, ತಮಿಳು, ಮಲಯಾಳ, ಹಿಂದಿ, ಇಂಗ್ಲಿಷ್‌ನಲ್ಲಿ ಡಬ್‌ ಆಗಿ ಸಿನಿಮಾ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT