ಮಂಗಳವಾರ, ಮಾರ್ಚ್ 31, 2020
19 °C

ರಾಜ್ಯಾದ್ಯಂತ ಲಾಕ್‌ಡೌನ್: ನಟ ರಕ್ಷಿತ್ ಶೆಟ್ಟಿ ಮನೆಯಲ್ಲಿದ್ದು ಏನು ಮಾಡ್ತಿದ್ದಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ದೇಶದಾದ್ಯಂತ ಕೊರೊನಾ ವೈರಸ್ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಲಾಕ್‌ಡೌನ್‌ಗೆ ಆದೇಶಿಸಲಾಗಿದೆ. ನಟ ರಕ್ಷಿತ್ ಶೆಟ್ಟಿ ವಾರದಿಂದಲೂ ಮನೆಯಲ್ಲೇ ಉಳಿದು ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ. ಸರ್ಕಾರದ ಮನವಿಯನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಈ ಪರಿಸ್ಥಿತಿಯು ಕೆಲ ಸಮಯ ಹೀಗೆಯೇ ಮುಂದುವರಿಯುತ್ತದೆ ಎಂದು ತಿಳಿದಿದ್ದರೆ ನಾನು ಕೂಡ ಊರಿಗೆ ಹೋಗುತ್ತಿದ್ದೆ ಆದರೆ ಆಗಿಲ್ಲ. ನಿಮ್ಮ ನಿಮ್ಮ ಮನೆಗಳನ್ನು ಬಿಟ್ಟು ಎಲ್ಲಿಗೂ ಹೋಗಬೇಡಿ. ಕಳೆದ ಒಂದು ವಾರದಿಂದಲೂ ನಾನು ಮನೆಯಲ್ಲೇ ಕುಳಿತು ಸುರಕ್ಷತೆಗೆ ಆದ್ಯತೆ ನೀಡಿದ್ದೇನೆ. ಚಾರ್ಲಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಬಂದಾಗಿನಿಂದಲೂ ಮನೆಯಲ್ಲೇ ಉಳಿದುಕೊಂಡಿದ್ದೇವೆ. ಅಂತರ್ಜಾಲದಲ್ಲಿ ಹಲವಾರು ಸುದ್ದಿಗಳು ಹರಡುತ್ತಿವೆ ಆದರೆ ಅಧಿಕೃತವಾಗಿ ಬಂದ ಸುದ್ದಿಗಳನ್ನು ಮಾತ್ರ ನಂಬಿ ಎಂದಿದ್ದಾರೆ.

ತಮ್ಮ ಬರವಣಿಗೆ ವೈಖರಿ ಬಗ್ಗೆ ಮಾಹಿತಿ ನೀಡಿರುವ ಅವರು, ಬರೆಯುವಾಗ ಪುಸ್ತಕಗಳನ್ನು ಓದುವ ಅಭ್ಯಾಸವಿದೆ. ಪುಸ್ತಕಗಳನ್ನು ಓದುತ್ತಲೇ ಸ್ಕ್ರಿಪ್ಟ್ ಬರೆಯುತ್ತೇನೆ. ಕಳೆದ 10 ದಿನಗಳಿಂದ ನೀವೆಲ್ಲ ನಿಮ್ಮ ಮನೆಯಲ್ಲಿ ಏನೆಲ್ಲಾ ಮಾಡುತ್ತಿದ್ದೀರಾ. ಬೇರೆ ದೇಶಗಳಲ್ಲಿರುವ ಪರಿಸ್ಥಿತಿಗೆ ನಾವು ಹೋಗದಿರಲು ಸರ್ಕಾರ ಮತ್ತು ವೈದ್ಯರು ಹೇಳುವ ಸೂಚನೆಗಳನ್ನು ಪಾಲಿಸಿಕೊಳ್ಳಬೇಕು. ಹಲವಾರು ಜನರು ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಆದರೆ ಕೆಲಸ ಮಾಡಲು ಸಾಧ್ಯವಾಗದವರು ಕುಟುಂಬದೊಂದಿಗೆ ಸಮಯ ಕಳೆಯಿರಿ. ಆದರೆ ಹೊರಗೆ ಹೋಗಬೇಡಿ ಎಂದು ತಿಳಿಸಿದ್ದಾರೆ.

ಸಮಯದ ಅಭಾವದಿಂದ ಕೈಬಿಟ್ಟಿದ್ದ ಎಲ್ಲ ಅಭ್ಯಾಸಗಳನ್ನು ಮುಂದುವರಿಸಲು ಇದೀಗ ಸಮಯ ಸಿಗುತ್ತಿದೆ. ಹಾಗಾಗಿ ಅದನ್ನು ಸದುಪಯೋಗಪಡಿಸಿಕೊಳ್ಳಿ. ಕಳೆದ 10 ದಿನಗಳಿಂದ ಏನು ಮಾಡುತ್ತಿದ್ದೀರಿ ಅಥವಾ ಮುಂದಿನ 10 ದಿನಗಳಲ್ಲಿ ಏನೆಲ್ಲಾ ಮಾಡಬೇಕು ಎಂದುಕೊಂಡಿದ್ದೀರಿ ಎನ್ನುವ ಕುರಿತು ನನ್ನೊಂದಿಗೆ ಮಾಹಿತಿ ಹಂಚಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

#HappilyQuarentined @twitterindia @the_biglittle #StayTheFHome #IndiaFightsCorona ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು