ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ಮತ್ತು ತಾರಾ ನಟ ದಳಪತಿ ವಿಜಯ್ ಅವರು ಮಲೇಷಿಯಾದಿಂದ ಚೆನ್ನೈಗೆ ಮರಳಿ ಕಾರು ಹತ್ತುವಾಗ ಕುಸಿದು ಬಿದ್ದಿದ್ದಾರೆ. ನಟ ದಳಪತಿ ವಿಜಯ್ ಆಯತಪ್ಪಿ ಬಿದ್ದ ವಿಡಿಯೊದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ನಟ ದಳಪತಿ ವಿಜಯ್ ಅವರು ಭಾನುವಾರದಂದು ಮಲೇಷಿಯಾದಿಂದ ಚೆನ್ನೈಗೆ ಮರಳುತ್ತಿದ್ದರು. ಆಗ ನಟನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನಸಮೂಹ ಸುತ್ತುವರೆದಿತ್ತು. ಇದೇ ವೇಳೆ ವಿಮಾನ ನಿಲ್ದಾಣದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ. ಆಗ ವಿಮಾನ ನಿಲ್ದಾಣದ ಹೊರಗಡೆ ನಡೆದುಕೊಂಡು ಕಾರಿನತ್ತ ಹೋಗುತ್ತಿದ್ದಂತೆ ಜನಸಂದಣಿ ಹೆಚ್ಚಾದಾಗ ಎಡವಿ ಬಿದ್ದಿದ್ದಾರೆ. ಆ ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಮೇಲೆತ್ತಿ ಕಾರಿಗೆ ಹತ್ತಿಸಲು ಸಹಾಯ ಮಾಡಿದ್ದಾರೆ.
.ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಆಡಿಯೊ ಬಿಡುಗಡೆ: ದಿನಾಂಕ ನಿಗದಿ.ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ಫಸ್ಟ್ಲುಕ್ ಬಿಡುಗಡೆ.
ಇನ್ನು, ಈ ಘಟನೆಗೂ ಮುನ್ನ ಭಾನುವಾರ ರಾತ್ರಿ ನಟ, ರಾಜಕಾರಣಿ ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ನಟ ಮಲೇಷ್ಯಾದಿಂದ ಚೆನ್ನೈಗೆ ಹಿಂತಿರುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.