ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video| ಶೂಟಿಂಗ್‌ ವೇಳೆ ನುಗ್ಗಿಬಂದ ವಾಹನ: ನಟ ವಿಶಾಲ್‌ ಪಾರು

Last Updated 23 ಫೆಬ್ರವರಿ 2023, 2:40 IST
ಅಕ್ಷರ ಗಾತ್ರ

ಚೆನ್ನೈ: 'ಮಾರ್ಕ್ ಆಂಟೋನಿ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದ ತಮಿಳು ನಟ-ನಿರ್ಮಾಪಕ ವಿಶಾಲ್ ಕೃಷ್ಣಾ ರೆಡ್ಡಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಿನಿಮಾದ ಚಿತ್ರೀಕರಣದ ವೇಳೆ ವಿಶಾಲ್‌ ನೆಲದ ಮೇಲೆ ಬೀಳುತ್ತಾರೆ. ಅದೇ ಹೊತ್ತಿಗೆ, ನಿಯಂತ್ರಣ ಕಳೆದುಕೊಂಡ ಭಾರೀ ವಾಹನವೊಂದು ಸಿನಿಮಾ ಸೆಟ್‌ಅನ್ನು ಗುದ್ದಿಕೊಂಡು ಬಂದು ವಿಶಾಲ್‌ ಪಕ್ಕದಲ್ಲೇ ಬಂದು ನಿಲ್ಲುತ್ತದೆ. ಸಹಕಲಾವಿದರೂ ವಿಶಾಲ್‌ ಅವರನ್ನು ಮತ್ತಷ್ಟು ದೂರಕ್ಕೆ ಒಯ್ಯುವುದು ವಿಡಿಯೊದಲ್ಲಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ವಿಶಾಲ್‌, ‘ಕೆಲವೇ ಸೆಕೆಂಡ್‌, ಕೆಲವೇ ಇಂಚುಗಳಲ್ಲಿ ನನ್ನ ಜೀವ ಉಳಿಯಿತು. ದೇವರಿಗೆ ಧನ್ಯವಾದಗಳು. ಈ ಘಟನೆಯಿಂದ ನಾನು ದಿಗ್ಭ್ರಾಂತನಾಗಿದ್ದೇನಾದರೂ, ಶೂಟಿಂಗ್‌ಗೆ ಹಿಂದಿರುಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಘಟನೆ ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT