ಭಾನುವಾರ, ಅಕ್ಟೋಬರ್ 24, 2021
29 °C

ಮುಂಬೈ ಏರ್‌ಪೋರ್ಟ್‌ನಲ್ಲಿ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡ ನಟ ಯಶ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಮುಗಿಸಿರುವ ನಟ ಯಶ್ ಸದ್ಯ ತಾವು ಮುಂದೆ ಯಾವ ಸಿನಿಮಾಕ್ಕೆ ಸಹಿ ಹಾಕುತ್ತಿದ್ದಾರೆ ಎಂಬ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಇದೆ.

ಇಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಯಶ್ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ.

ತಮ್ಮ ಎಂದಿನ ಸಿಗ್ನೇಚರ್ ಲುಕ್‌ನಲ್ಲಿ ಹಸಿರು ಫುಲ್ ಸ್ಲೀವ್ ಟಿ ಶರ್ಟ್ ಹಾಗೂ ಕಪ್ಪು ಜೀನ್ಸ್‌ನಲ್ಲಿ ದುಬಾರಿ ಕನ್ನಡಕದ ಮೂಲಕ ಯಶ್ ಏರ್‌ಪೋರ್ಟ್‌ನಲ್ಲಿದ್ದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

 

ಈ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲದೇ ಈ ವೇಳೆ ಸೆಲ್ಪಿ ಕೇಳಿದ ಅಭಿಮಾನಿಗಳಿಗೆ ನಗುತ್ತಾ ಯಶ್ ಪೋಸ್ ಕೊಟ್ಟಿದ್ದಾರೆ.

 

ಕೆಜಿಎಫ್ ಚಾಪ್ಟರ್ 2 ಮುಗಿಸಿರುವ ರಾಕಿಂಗ್ ಸ್ಟಾರ್ ಮುಂದೆ ಯಾವ ಸಿನಿಮಾ ಮಾಡುತ್ತಾರೆ ಎನ್ನವುದನ್ನು ಬಿಟ್ಟು ಕೊಟ್ಟಿಲ್ಲ. ಅದ್ಧೂರಿ ಬಜೆಟ್‌ ಹಾಗೂ ಪ್ಯಾನ್ ಇಂಡಿಯಾ ಸಿನಿಮಾವಾಗಿ ಕೆಜಿಎಫ್ ಚಾಪ್ಟರ್ 2 ಮುಂದಿನ ವರ್ಷ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: 'ಸೂರ್ಯವಂಶಿ' ಟ್ವೀಟ್: ನಟ ಅಕ್ಷಯ್ ಕುಮಾರ್‌ಗೆ ಬುದ್ದಿ ಹೇಳಿದ ಐಪಿಎಸ್ ಅಧಿಕಾರಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು