ಬೆಂಗಳೂರು: ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ತಮ್ಮ ಮಗನ ಚಿತ್ರವನ್ನು ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಿದ್ದಾರೆ. ಅವರ ಎರಡನೇ ಮಗುವಿನ ಚಿತ್ರ ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಗನಿಗೆ 6ನೇ ತಿಂಗಳು ತುಂಬಿದ ಸಂದರ್ಭದಲ್ಲಿ ಫೋಟೊ ಹಂಚಿಕೊಳ್ಳುವುದಾಗಿ ರಾಧಿಕಾ ಪಂಡಿತ್ ಬುಧವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು. ಅಕ್ಕ ಐರಾಳ ಜೊತೆಗೆ ಕುಳಿತ ಪುಟಾಣಿಯ ಮುಖ ಅರ್ಧ ಮಾತ್ರ ಕಾಣುವಂತೆ ಫೋಟೊ ಪ್ರಕಟಿಸಿದ್ದರು. ಇಂದು ಯಶ್ ಮತ್ತು ರಾಧಿಕಾ ಇಬ್ಬರೂ 'ಜೂನಿಯರ್ ಯಶ್' ಫೋಟೊ ಹಂಚಿಕೊಂಡಿದ್ದಾರೆ.

'ನಿಮ್ಮ ಪ್ರೀತಿ... ಆಶೀರ್ವಾದ.. ಹಾರೈಕೆ... ಸದಾ ಈ ನನ್ನ ಪುಟ್ಟ ಕಂದನ ಮೇಲಿರಲಿ' ಎಂದು ಯಶ್ ಬರೆದುಕೊಂಡಿದ್ದಾರೆ.

ರಾಧಿಕಾ, 'ನನ್ನ ಕಂಗಳಿಗೆ ಸೇಬಿನಂತೆ ಕಾಣುವ, ಇಡೀ ಕುಟುಂಬಕ್ಕೆ ಕಾಮನ ಬಿಲ್ಲಿನಂತಿರುವ ಹಾಗೂ ಖಂಡಿತವಾಗಿಯೂ ಅಮ್ಮನ ಮಗ, ಪುಟಾಣಿ ಜ್ಯೂನಿಯರ್ ಇಲ್ಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ನೀಡಿ' ಎಂದು ಪ್ರಕಟಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.