ಬೆಂಗಳೂರು: ಬಾಲಿವುಡ್ ರ್ಯಾಪರ್ ಯೋ ಯೋ ಹನಿ ಸಿಂಗ್ ಅವರು ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿದ್ದಾರೆ. ಹನಿ ಸಿಂಗ್ ಕಾರ್ಯಕ್ರಮದ ವೇಳೆ ಚಂದನವನದ ನಟ ಯಶ್ ವೇದಿಕೆಗೆ ಅಚ್ಚರಿಯ ಭೇಟಿ ನೀಡಿದ್ದಾರೆ.

ಹನಿ ಸಿಂಗ್ ಶನಿವಾರ ಬೆಂಗಳೂರಿನಲ್ಲಿ ‘ಮಿಲಿಯನೇರ್ ಇಂಡಿಯಾ ಟೂರ್’ ಎನ್ನುವ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಒಂದೇ ವೇದಿಕೆಯಲ್ಲಿ ಇಬ್ಬರು ಕಲಾವಿದರನ್ನು ಕಂಡ ಜನ ಕೂಗಿ ಸಂಭ್ರಮಿಸಿದರು.

ಈ ಕುರಿತು ಹನಿ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಯಶ್ ಅವರನ್ನು ಪರಿಚಯಿಸಿದ ಹನಿ ಸಿಂಗ್, ‘ನಮ್ಮಿಬ್ಬರದ್ದು ಒಂದೇ ಕಥೆ. ನಾವಿಬ್ಬರು ವೇದಿಕೆ ಹಂಚಿಕೊಂಡಾಗ ಸಹೋದರ ಭಾವನೆ ಮೂಡುತ್ತದೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯಶ್, ‘ಪ್ರೀತಿ ಮತ್ತು ಗೌರವ ಬಹು ಮುಖ್ಯವಾಗುತ್ತದೆ. ಜನ ನಿಮ್ಮನ್ನು ಪ್ರೀತಿಸುತ್ತಾರೆ, ಹೀಗೆ ಸಾಗುತ್ತಿರಿ’ ಎಂದಿದ್ದಾರೆ.

ಇದಕ್ಕೂ ಮೊದಲು ಹನಿ ಸಿಂಗ್ ಅವರನ್ನು ಯಶ್ ಕನ್ನಡದಲ್ಲೇ ಕರ್ನಾಟಕಕ್ಕೆ ಸ್ವಾಗತಿಸಿದರು.

ಇದೇ ವೇಳೆ, ಯಶ್ ಅವರು ಒಪ್ಪಿದರೆ ಅವರೊಂದಿಗೆ ಕೆಲಸ ಮಾಡಲು ಇಚ್ಚಿಸುತ್ತೇನೆ ಎಂದು ಹನಿ ಸಿಂಗ್ ಹೇಳಿದ್ದಾರೆ. ಇದಕ್ಕೆ ಯಶ್ ಒಪ್ಪಿದ್ದು, ಕನ್ನಡದಲ್ಲೂ ಹಾಡನ್ನು ಹಾಡಬೇಕು ಎಂದು ಷರತ್ತು ಹಾಕಿದ್ದಾರೆ, ಇದಕ್ಕೆ ಹನಿ ಸಿಂಗ್ ಅವರೂ ಒಪ್ಪಿಗೆ ನೀಡಿದ್ದಾರೆ.

ಕಾರ್ಯಕ್ರಮದಲ್ಲೇ ಯಶ್ ತಮ್ಮ ಮುಂದಿನ ಸಿನಿಮಾ ಟಾಕ್ಸಿಕ್ 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದರು.
.Toxic Release Date: 2026ಕ್ಕೆ ಯಶ್ ನಟನೆಯ ಟಾಕ್ಸಿಕ್.TOXIC: ಯಶ್ 19ನೇ ಚಿತ್ರ ಟಾಕ್ಸಿಕ್ ನಿರ್ದೇಶಿಸುತ್ತಿರುವ ಗೀತು ಮೋಹನ್ದಾಸ್ ಯಾರು?.ನಟ ಯಶ್, ಚಿತ್ರ ‘ಟಾಕ್ಸಿಕ್’ ಅದ್ಭುತ ಎಂದ ಹಾಲಿವುಡ್ನ ಸಾಹಸ ನಿರ್ದೇಶಕ ಪೆರ್ರಿ.Toxic Movie | ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲಿ ಅಕ್ಷಯ್ ಒಬೆರಾಯ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.