ಶನಿವಾರ, ಜನವರಿ 29, 2022
23 °C

‘ಜಮಾಲಿಗುಡ್ಡ’ದಲ್ಲಿ ಹೀಗಿದ್ದಾರೆ ಅದಿತಿ ಪ್ರಭುದೇವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಚಂದನವನದ ಮಹಾಲಕ್ಷ್ಮಿ’ ಎಂದೇ ಖ್ಯಾತಿ ಪಡೆದಿರುವ ನಟಿ ಅದಿತಿ ಪ್ರಭುದೇವ ಅವರ ಜನ್ಮದಿನ ಇಂದು. ಹತ್ತಾರು ಸಿನಿಮಾಗಳು ಇವರ ಕೈಯಲ್ಲಿದ್ದು ಇದಕ್ಕೆ ಹೊಸ ಸೇರ್ಪಡೆ ‘Once upon a time in ಜಮಾಲಿಗುಡ್ಡ’. ಇದರಲ್ಲಿ ಅದಿತಿ ಹೇಗಿರುತ್ತಾರೆ ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. 

ಈ ಸಿನಿಮಾದಲ್ಲಿ ವಿಭಿನ್ನ ಲುಕ್‌ನಲ್ಲಿ ಅದಿತಿ ಕಾಣಿಸಿಕೊಳ್ಳಲಿದ್ದು, ಚಿತ್ರದ ನಾಯಕ, ನಟ ‘ಡಾಲಿ ಧನಂಜಯ್‌’ ಅವರು ಚಿತ್ರದ ಪೋಸ್ಟರ್‌ ಟ್ವೀಟ್‌ ಮಾಡುವ ಮೂಲಕ ಅದಿತಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಕುಶಾಲ್‌ ಗೌಡ ನಿರ್ದೇಶನದ ಈ ಚಿತ್ರವನ್ನು ಶ್ರೀ ಹರಿ ನಿರ್ಮಾಣ ಮಾಡುತ್ತಿದ್ದಾರೆ. ‘ಟಗರು’, ‘ಸಲಗ’ ಖ್ಯಾತಿ ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಭಾವನಾ, ಪ್ರಕಾಶ್‌ ಬೆಳವಾಡಿ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

ದಾವಣಗೆರೆಯ ಅದಿತಿ ಕಿರುತೆರೆಯಿಂದ ‘ಧೈರ್ಯಂ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ಸದ್ಯ ಎರಡು ಭಾಗಗಳಲ್ಲಿ ಬರಲಿರುವ ನಟ ಜಗ್ಗೇಶ್‌ ನಟನೆಯ ‘ತೋತಾಪುರಿ’, ನಟ ಗಣೇಶ್‌ ಅಭಿನಯದ ‘ತ್ರಿಬಲ್‌ ರೈಡಿಂಗ್‌, ನಟ ಪ್ರಜ್ವಲ್‌ ದೇವರಾಜ್‌ ನಟನೆಯ ‘ಮಾಫಿಯಾ’, ‘ಗಜಾನನ ಆ್ಯಂಡ್‌ ಗ್ಯಾಂಗ್‌’, ‘ಒಂಬತ್ತನೇ ದಿಕ್ಕು’, ‘ಓಲ್ಡ್‌ ಮಾಂಕ್‌’, ‘5ಡಿ’, ‘ಅಂದೊಂದಿತ್ತು ಕಾಲ’, ‘ಆನ’ ಹೀಗೆ ಹತ್ತಕ್ಕೂ ಅಧಿಕ ಚಿತ್ರಗಳು ಅದಿತಿ ಕೈಯಲ್ಲಿದೆ. ಇವುಗಳಲ್ಲಿ ಕೆಲವು ಬಿಡುಗಡೆಗೆ ಸಜ್ಜಾಗಿದ್ದು, ಚರ್ಚೆಯ ಹಂತದಲ್ಲಿರುವ ಸಿನಿಮಾಗಳನ್ನು ಸೇರಿಸಿದರೆ ಪಟ್ಟಿ ಇನ್ನಷ್ಟು ಬೆಳೆಯುತ್ತದೆ. 

ಇತರೆ ಭಾಷೆಗಳಿಂದಲೂ ಅದಿತಿ ಅವರನ್ನು ಅವಕಾಶಗಳು ಅರಸಿ ಬಂದಿವೆ. ಆದರೆ ಚಂದನವನದಲ್ಲೇ ಹೆಚ್ಚಿನ ಅವಕಾಶ ಇರುವುದರಿಂದ ಸದ್ಯಕ್ಕೆ ಪರಭಾಷಾ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ನನ್ನನ್ನು ನಂಬಿ ಇಲ್ಲಿ ಕೆಲಸ ನೀಡಿರುವಾಗ ಚಂದನವನ ಬಿಟ್ಟು ಹೋಗುವುದಿಲ್ಲ. ಕೈಯಲ್ಲಿರುವ ಸಿನಿಮಾಗಳನ್ನೇ ಪೂರ್ಣಗೊಳಿಸುವುದರತ್ತ ನನ್ನ ಚಿತ್ತವಿದೆ ಎಂದು ಇತ್ತೀಚೆಗಷ್ಟೇ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅದಿತಿ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು