ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಸಂಪ್ರದಾಯದಂತೆ ಹಸೆಮಣೆಯೇರಿದ ನಟಿ ಹರ್ಷಿಕಾ ಪೂಣಚ್ಚ–ಭುವನ್ ಪೊನ್ನಣ್ಣ

Published 24 ಆಗಸ್ಟ್ 2023, 10:49 IST
Last Updated 24 ಆಗಸ್ಟ್ 2023, 10:49 IST
ಅಕ್ಷರ ಗಾತ್ರ

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಪೊನ್ನಣ್ಣ ಕೊಡವ ಸಂಪ್ರದಾಯದಂತೆ ಇಂದು ಹಸೆಮಣೆ ಏರಿದ್ದು, 10 ವರ್ಷದ ಪ್ರೀತಿಗೆ ದಾಂಪತ್ಯದ ಬಂಧ ಬಿಗಿದಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯ ಕೊಡವ ಸಮಾಜದಲ್ಲಿ ವಿವಾಹ ನೆರವೇರಿದ್ದು, ಚಿತ್ರರಂಗದ ಅನೇಕರು ಮದುವೆಯಲ್ಲಿ ಭಾಗಿಯಾಗಿ ದಂಪತಿಗೆ ಶುಭಹಾರೈಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮುರಗೇಶ್ ನಿರಾಣಿ, ಡಾ. ಕೆ. ಸುಧಾಕರ್‌, ಹಿರಿಯ ನಟಿಯರಾದ ಸುಧಾರಾಣಿ, ಜಯಮಾಲಾ, ಗೋಲ್ಡನ್ ಸ್ಟಾರ್ ಗಣೇಶ್‌, ಅನುಪ್ರಭಾಕರ್‌, ಪೂಜಾಗಾಂಧಿ ಸೇರಿದಂತೆ ಅನೇಕರು ಮದುವೆಯಲ್ಲಿ ಭಾಗಿಯಾಗಿದ್ದಾರೆ.

2008ರಲ್ಲಿ ಕೊಡವ ಭಾಷೆಯ ‘ಪೊನ್ನಮ್ಮ’ ಚಿತ್ರದ ಮೂಲಕ ನಟನಾ ಬದುಕಿಗೆ ಕಾಲಿಟ್ಟ ಹರ್ಷಿಕಾ ಪೂಣಚ್ಚ ನಂತರ ಕೊಂಕಣಿ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್‌ ರಾಜ್‌ಕುಮಾರ್ ಅಭಿನಯದ ‘ಜಾಕಿ’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಶಿವರಾಜ್‌ಕುಮಾರ್ ಅಭಿನಯದ ‘ತಮಸ್ಸು’ ಚಿತ್ರದಲ್ಲಿನ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಕಿಚ್ಚ ಸುದೀಪ್‌ ಅವರ ‘ಜಸ್ಟ್‌ ಮಾತ್‌ ಮಾತಲ್ಲಿ‘ ಸಿನಿಮಾದಲ್ಲಿ ನಟಿಸಿದ್ದ ಭುವನ್‌ ಪೊನ್ನಣ್ಣ, ನಂತರ ಬಿಗ್‌ ಬಾಸ್‌ ಸೀಸನ್ 4ರಲ್ಲಿ ಕಾಣಿಸಿಕೊಂಡಿದ್ದರು.

ಕೊಡವ ಸಂಪ್ರದಾಯದಂತೆ ಹಸೆಮಣೆಯೇರಿದ ನಟಿ ಹರ್ಷಿಕಾ ಪೂಣಚ್ಚ–ಭುವನ್ ಪೊನ್ನಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT