ಬಾಲಿವುಡ್ನ ‘ಮುನ್ನ ಮೈಕೆಲ್’ ಸಿನಿಮಾದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡ ಬೆರಗುಗಣ್ಣಿನ ಚೆಲುವೆ ನಿಧಿ ಅಗರ್ವಾಲ್. ನಂತರ ತೆಲುಗಿನ ‘ಸವ್ಯಸಾಚಿ’ ಹಾಗೂ ‘ಮಿ.ಮಜ್ನು’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರಿಗೆ ಗೆಲುವು ತಂದುಕೊಟ್ಟಿದ್ದು ಪುರಿ ಜಗನ್ನಾಥ್ ನಿರ್ದೇಶನದ ‘ಇಸ್ಮಾರ್ಟ್ ಶಂಕರ್’ ಸಿನಿಮಾ.

ಸಿನಿಮಾಗಳಲ್ಲಿ ಬೋಲ್ಡ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಈ ನಟಿ ಲಾಕ್ಡೌನ್ ಸಮಯದಲ್ಲಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳ ಜೊತೆ ಸುದೀರ್ಘ ಸಂವಹನ ನಡೆಸಿದ್ದಾರೆ.

ಈ ವೇಳೆ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆಯೂ ತುಟಿ ಬಿಚ್ಚಿದ್ದಾರೆ.

ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಇವರು ‘ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಅಲ್ಲದೇ ಕ್ರಿಕೆಟಿಗ ಕೆ.ಎಲ್. ರಾಹುಲ್ ಜೊತೆ ಈಕೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು ಅದು ಕೂಡ ಗಾಳಿಸುದ್ದಿ ಎಂದಿದ್ದಾರೆ.

ಡೇಟಿಂಗ್ ವಿಷಯದ ಬಗ್ಗೆ ಈ ಇಬ್ಬರೂ ಸೆಲೆಬ್ರೆಟಿಗಳು ಅಲ್ಲಗಳೆದಿದ್ದರೂ ಆಗಾಗ ಈ ಸುದ್ದಿ ಕೇಳಿ ಬರುತ್ತಲೇ ಇತ್ತು. ಈಗ ನಿಧಿ ಮತ್ತೊಮ್ಮೆ ‘ನಾನು ಏಕಾಂಗಿ, ನನಗೆ ಯಾರೊಂದಿಗೂ ಪ್ರೇಮ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ತನ್ನ ಹಾಟ್ ಫೋಟೊಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುವ ಈಕೆ ಇನ್ಸ್ಟಾಗ್ರಾಂ ಖಾತೆಯಲ್ಲಿ 5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಕನ್ನಡದ ‘ಜೇಮ್ಸ್’ ಸಿನಿಮಾದಲ್ಲಿ ನಟಿಸುತ್ತಿರುವ ನಿಧಿ, ತೆಲುಗಿನಲ್ಲಿ ರಮೇಶ್ ವರ್ಮಾ ಹಾಗೂ ಅಶೋಕ್ ಗಲ್ಲಾ ನಿರ್ದೇಶನದ ರವಿತೇಜ ಅವರ ಮುಂದಿನ ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.