ನಸ್ರೀನ್ ಪಾತ್ರದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಭಾವನಾತ್ಮಕ ಮಾತು

ಮುಂಬೈ: ಬಾಲಿವುಡ್‌ನಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ 'ನಸ್ರೀನ್' ಪಾತ್ರದ ಮೂಲಕ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಮಿಷನ್ ಮಜ್ನು’ ಸ್ಪೈ ಥ್ರಿಲ್ಲರ್ ಹಿಂದಿ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತೆರೆ ಹಂಚಿಕೊಂಡಿರುವ ಮಂದಣ್ಣ, ಈ ಚಿತ್ರದ ಪಾತ್ರದ ಬಗ್ಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡು, ಅಡಿ ಬರಹದಲ್ಲಿ ನಸ್ರೀನ್ ಪಾತ್ರದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಅತಿಯಾದ ಪ್ರೀತಿ ಮತ್ತು ಮುಗ್ಧತೆಯ ಪ್ರತೀಕ ಈ ಪಾತ್ರ. ಯಾರು ಯಾವಾಗಲೂ ತನ್ನ ಪ್ರೀತಿ ಪಾತ್ರರನ್ನೂ ಅತಿಯಾಗಿ ಪ್ರೀತಿಸುತ್ತಾಳೋ ಹಾಗೂ ಬೆಂಬಲಿಸುತ್ತಾಳೋ ಅವಳು, ತನ್ನ ನೋವು ಮತ್ತು ಕಷ್ಟಗಳನ್ನು ಮೌನವಾಗಿ ಎದುರಿಸುತ್ತಾಳೆ. ಅವಳ ಪ್ರೀತಿ ಪಾತ್ರರಾದವರ ಮುಖದಲ್ಲಿ ನಗು ತರಿಸಲು ಪ್ರಯತ್ನಿಸುತ್ತಾಳೆ. ಅವಳೂ ಪರಿಪೂರ್ಣಳಲ್ಲ, ಎಂದಾಗಲೂ ಖುಷಿ ಹಾಗೂ ಸ್ಥಿರವಾಗಿರುತ್ತಾಳೆ ಎಂದು ಉಲ್ಲೇಖಿಸಿದ್ದಾರೆ.
ನಸ್ರೀನ್ ನಿಮ್ಮೆಲ್ಲರ ಹೃದಯದಲ್ಲಿ ಸ್ಥಾನ ಪಡೆಯುತ್ತಾಳೆ, ನಿಮ್ಮ ಮುಂದೆ ನಸ್ರೀನ್ ಬರುತ್ತಿದ್ದಾಳೆ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರವು 1970ರ ದಶಕ ನೈಜ ಘಟನೆಗಳನ್ನು ಆಧರಿಸಿದೆ. RAW ಏಜೆಂಟ್ ಆಗಿ ಸಿದ್ಧಾರ್ಥ್ ಮಲ್ಹೋತ್ರಾ ಪಾತ್ರ ಮೂಡಿಬಂದಿದೆ. ದೇಶ ಭಕ್ತಿ, ಪರಮಾಣು ಕೇಂದ್ರ, ರಕ್ಷಣಾ ವ್ಯವಸ್ಥೆ ಜೊತೆಗೆ ಭಾವನ್ಮಾತಕ ಸನ್ನಿವೇಶವನ್ನು ಒಳಗೊಂಡ ಕಥಾ ಹಂದರ ಚಿತ್ರದಲ್ಲಿದೆ.
ಈಗಾಗಲೇ ಚಿತ್ರ ಪ್ರಕ್ಷೇಕರು ಮಿಶ್ರ ಪ್ರತಿಕ್ರಿಯೆಯನ್ನು ನೀಡಿದ್ದು, ಐತಿಹಾಸಿಕ ಘಟನೆಗಳ ಬಗ್ಗೆ ಶ್ಲಾಘಿಸಿದರೆ, ಚಿತ್ರದಲ್ಲಿ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕೊರತೆ ಕಾಣುತ್ತದೆ ಎಂದಿದ್ದಾರೆ.
ಇದನ್ನು ಓದಿ: #Kantara2: ಕಾಂತಾರ–2ಕ್ಕೆ ಸಿದ್ಧರಾಗುತ್ತಿದ್ದಾರಾ ರಿಷಬ್? ಇಲ್ಲಿದೆ ಮಾಹಿತಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.