ಸೋಮವಾರ, ಮಾರ್ಚ್ 27, 2023
33 °C

 ನಟಿ ಸಮಂತಾ ಅಕ್ಕಿನೇನಿ ತಾಯ್ತನಕ್ಕೆ ನಿಗದಿಪಡಿಸಿರುವ ದಿನಾಂಕ ಯಾವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಓ ಬೇಬಿ’ ಚಿತ್ರದ ಗೆಲುವಿನ ಬಳಿಕ ಟಾಲಿವುಡ್‌ನಲ್ಲಿ ನಟಿ ಸಮಂತಾ ಅಕ್ಕಿನೇನಿಯ ಅದೃಷ್ಟವೂ ಬದಲಾಗಿದೆ. ಇದು ಕೋರಿಯನ್‌ ಚಿತ್ರ ‘ಮಿಸ್‌ ಗ್ರಾನಿ’ಯ ರಿಮೇಕ್ ಎನ್ನುವುದು ವಿಶೇಷ. ವೆಬ್‌ ಸರಣಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

2017ರ ಅಕ್ಟೋಬರ್‌ನಲ್ಲಿ ಗೋವಾದಲ್ಲಿ ಸಮಂತಾ ಮತ್ತು ನಾಗಚೈತನ್ಯ ಸಪ್ತಪದಿ ತುಳಿದರು. ಯಾವುದೇ, ಪ್ರವಾಸಿ ತಾಣಕ್ಕೆ ಹೋದರೂ ಅಲ್ಲಿ ಗಂಡನೊಟ್ಟಿಗೆ ಕಳೆದ ಸುಂದರ ಕ್ಷಣಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರಲ್ಲಿ ಸಮಂತಾ ಸದಾ ಮುಂದು. ‌

ಮತ್ತೊಂದೆಡೆ ಆಕೆ ಎಲ್ಲಿಗೆ ಹೋದರೂ ಅಭಿಮಾನಿಗಳು ಮತ್ತು ಮಾಧ್ಯಮದವರಿಂದ ತೇಲಿಬರುವುದು ಒಂದೇ ಪ್ರಶ್ನೆ. ‘ಸಮಂತಾ ತಾಯ್ತನದ ಸುಖ ಅನುಭವಿಸುವುದು ಯಾವಾಗ?’ ಎನ್ನುವ ಎಲ್ಲರ ಪ್ರಶ್ನೆಗೆ ಆಕೆಯೇ ದಿನಾಂಕ ನಿಗದಿಪಡಿಸಿ ಎಲ್ಲರನ್ನೂ ಅಚ್ಚರಿಯ ಮಡುವಿಗೆ ದೂಡಿದ್ದಾರೆ.

‘2022ರ ಆಗಸ್ಟ್‌ 7ರಂದು ಬೆಳಿಗ್ಗೆ 7ಗಂಟೆಗೆ ನಾನು ನನ್ನ ಮಗುವಿಗೆ ತಾಯಿಯಾಗುತ್ತೇನೆ’ ಎಂದು ‘ರಂಗಸ್ಥಳಂ’ ಖ್ಯಾತಿಯ ನಾಯಕಿ ದಿನಾಂಕ ಘೋಷಿಸಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ‘ನಾನು ಮತ್ತು ನಾಗಚೈತನ್ಯ ಮಗುವಿನ ಬಗ್ಗೆ ಚರ್ಚಿಸಿದ್ದೇವೆ’ ಎಂದು ಹೇಳಿದ್ದರು. ‘ನನಗೆ ನನ್ನ ಮಗುವೇ ಸರ್ವಸ್ವ. ನನ್ನ ಬಾಲ್ಯ ಬಹಳಷ್ಟು ಸುಂದರವಾಗಿರಲಿಲ್ಲ. ಕೆಲಸ ನಿರತ ತಾಯಂದಿರನ್ನು ನಾನು ಗೌರವಿಸುತ್ತೇನೆ. ಮಕ್ಕಳಿಗೆ ನಾವು ಎಲ್ಲವನ್ನೂ ಕಲ್ಪಿಸಿಕೊಡಬೇಕು’ ಎಂದಿದ್ದಾರೆ ಸಮಂತಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು