ಬುಧವಾರ, ಮೇ 25, 2022
26 °C

ಫೋಟೊ ತೆಗೆಯುವಾಗ ಕೆಳಗೆ ಬಿದ್ದವರ ಸಹಾಯಕ್ಕೆ ಧಾವಿಸಿದ ಸನ್ಯಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Sanya Malhotra Instagram

ಬೆಂಗಳೂರು: ದಂಗಲ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿರುವ ನಟಿ ಸನ್ಯಾ ಮಲ್ಹೋತ್ರಾ, ತಮ್ಮ ವಿಶಿಷ್ಟ ನಟನೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಸನ್ಯಾ, ಇತ್ತೀಚೆಗೆ ಮನೆಯಿಂದ ತೆರಳುವಾಗ ಹೊರಗಡೆ ಇದ್ದ ಫೋಟೊಗ್ರಾಫರ್ ಒಬ್ಬರು, ಅವರ ಚಿತ್ರ ಕ್ಲಿಕ್ಕಿಸುವಾಗ ಹಿಂದಕ್ಕೆ ಚಲಿಸಿ ಆಯತಪ್ಪಿ ಬಿದ್ದುಬಿಟ್ಟಿದ್ದರು.

ತಕ್ಷಣವೇ ಅವರತ್ತ ಓಡಿದ ನಟಿ, ಫೋಟೊಗ್ರಾಫರ್ ಕೈಹಿಡಿದು ಎಬ್ಬಿಸಿದ್ದಾರೆ. ಬಳಿಕ, ‘ನಿಮಗೇನೂ ಆಗಿಲ್ಲ ತಾನೇ? ಆರಾಮವಾಗಿದ್ದೀರಾ?‘ ಎಂದು ವಿಚಾರಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಸಿನಿಮಾ ನಟ–ನಟಿಯರು ಹೊರಗಡೆ ಹೋದಾಗ ಅವರನ್ನು ಸುತ್ತುವರಿದು ಫೋಟೊ, ವಿಡಿಯೊ ಚಿತ್ರೀಕರಿಸುವವರಿಂದ ಸೆಲೆಬ್ರಿಟಿಗಳು ಹಲವು ಬಾರಿ ಕಿರಿಕಿರಿ ಅನುಭವಿಸುತ್ತಾರೆ. ಅಲ್ಲದೆ, ಫೋಟೊ ತೆಗೆಯುವವರು ಕೂಡ ಸಿನಿಮಾ ಮಂದಿಯ ಬಾಡಿಗಾರ್ಡ್‌ಗಳಿಂದ ಬೈಗುಳ ಕೇಳಬೇಕಾಗುತ್ತದೆ.

ಅಂತಹ ಸನ್ನಿವೇಶದಲ್ಲಿ ನಟಿ ಸನ್ಯಾ, ಅಪರಿಚಿತ ವ್ಯಕ್ತಿಗೆ ಸಹಾಯ ಮಾಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಸನ್ಯಾ ಅವರು ಬದಾಯಿ ಹೊ, ಫೋಟೊಗ್ರಾಫ್, ಲೂಡೊ ಮತ್ತು ಶಕುಂತಲಾ ದೇವಿ ಚಿತ್ರದಲ್ಲಿನ ನಟನೆಗೆ ಜನರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ಇತ್ತೀಚೆಗೆ ತೆರೆಕಂಡ ಮೀನಾಕ್ಷಿ ಸುಂದರಮ್ ಚಿತ್ರದಲ್ಲಿನ ನಟನೆಗೂ ಸನ್ಯಾ ಶಹಭಾಷ್ ಗಿಟ್ಟಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು