ಬುಧವಾರ, ಅಕ್ಟೋಬರ್ 27, 2021
21 °C

ಕರ್ನಾಟಕ ತೊರೆಯುತ್ತಾರಾ ನಟಿ ವಿಜಯಲಕ್ಷ್ಮೀ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನನಗೆ ಹಣ ಬೇಡ. ನೆಮ್ಮದಿ ಬೇಕು. ಅದಕ್ಕಾಗಿ ಅಕ್ಕನನ್ನು ಕರೆದುಕೊಂಡು ದೂರ ಹೋಗುತ್ತೇನೆ. ಯಾರ ಕಣ್ಣಿಗೂ ಕಾಣಿಸುವುದಿಲ್ಲ ಎಂದು ನಟಿ ವಿಜಯಲಕ್ಷ್ಮೀ ಹೇಳಿದ್ದಾರೆ. 

ವಿಡಿಯೋವೊಂದರಲ್ಲಿ ಮಾತನಾಡಿರುವ ಅವರು, ‘ನನಗೆ ನೆರವಾಗಲು ಯೋಗೇಶ್‌ ಎಂಬುವವರ ಖಾತೆಗೆ ಹಾಕಿರುವ ₹ 3 ಲಕ್ಷ ನನಗೆ ಬೇಡ. ಇದುವರೆಗೂ ಆ ಹಣ ಸಿಕ್ಕಿಲ್ಲ. ಇತ್ತೀಚೆಗೆ ಯಾರ್ಯಾರೋ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಕೃತಜ್ಞತೆ ಇಲ್ಲದವಳ ರೀತಿ ಬಿಂಬಿಸುತ್ತಿದ್ದಾರೆ. ಹೀಗಾಗಿ ನಾನು ಕರ್ನಾಟಕ ಬಿಟ್ಟು ಹೋಗುತ್ತೇನೆ’ ಎಂದಿದ್ದಾರೆ. 

ಯೋಗೇಶ್‌ ಎಂಬುವವರು ಹಣಕ್ಕಾಗಿ ನನಗೆ ಕಿರುಕುಳ ಕೊಡುತ್ತಿದ್ದಾರೆ. ಹೀಗಾಗಿ ಅವರು ಸಂಗ್ರಹಿಸಿದ ಹಣ ನನಗೆ ಬೇಡ. ನಾಡಿನ ಜನರು ಕೊಟ್ಟಿರುವ ಹಣ ಸಾಕಷ್ಟು ಇದೆ. ನಾನು ಜನರಿಗೆ ನಿಯತ್ತಾಗಿರುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್ ಹಿರಿಯ ನಟ ಸತ್ಯಜಿತ್ ಆರೋಗ್ಯದಲ್ಲಿ ವ್ಯತ್ಯಯ, ಆಸ್ಪತ್ರೆಗೆ ದಾಖಲು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು