ಗುರುವಾರ , ಏಪ್ರಿಲ್ 15, 2021
29 °C

ಲವ್ ಆಗಲಿದೆ ವೀಕ್ಷಕರಿಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಗಿಣಿ ದ್ವಿವೇದಿ ಮತ್ತು ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾ ವೀಕ್ಷಕರನ್ನು ನಗಿಸಲು ಬರುವ ದಿನಗಳು ಹತ್ತಿರವಾಗುತ್ತಿವೆ. ಇದು ಆಗಸ್ಟ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

‘ನಮಗೆ ಇದು ವಿಶೇಷ ಸಿನಿಮಾ’ ಎನ್ನುತ್ತಾರೆ ರಾಗಿಣಿ. ‘ಚಿತ್ರದ ಶೇಕಡ 80ರಷ್ಟು ಭಾಗಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲದೆ, ಸಿನಿಮಾ ವಿಚಾರದಲ್ಲಿ ನಿರ್ಮಾಪಕರು ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಂಡಿಲ್ಲ’ ಎಂಬ ಮಾತು ಸೇರಿಸಿದರು.

ಚಿತ್ರದ ನಿರ್ದೇಶನ ಯೋಗಾನಂದ್ ಅವರದ್ದು. ರಾಗಿಣಿ ಮಾತಿನಲ್ಲಿ ಹೇಳುವುದಾದರೆ, ‘ಯೋಗಾನಂದ್ ಅವರು ನಿರ್ದೇಶಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ’. ಈ ಚಿತ್ರದ ಹಾಡುಗಳು ಈ ವರ್ಷ ಟ್ರೆಂಡ್‌ ಸೃಷ್ಟಿಸುವುದು ಖಚಿತ ಎಂಬುದು ರಾಗಿಣಿ ಅವರಲ್ಲಿನ ವಿಶ್ವಾಸ.

ಅವರು ಇದರಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಹಾಸ್ಯಮಯವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಒಂದಿಷ್ಟು ಬೋಲ್ಡ್‌ ಆಗಿಯೂ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ‘ನಾಯಕ ಮತ್ತು ನಾಯಕಿಯ ಅಭಿನಯ ಕಂಡು ವೀಕ್ಷಕರು ಫಿದಾ ಆಗುತ್ತಾರೆ’ ಎಂದು ಖಚಿತವಾಗಿ ಹೇಳುತ್ತಾರೆ ರಾಗಿಣಿ.

ಹಾಸ್ಯಮಯ ಸಂಭಾಷಣೆಗಳೇ ಚಿತ್ರದ ಬೆನ್ನೆಲುಬು ಎನ್ನುತ್ತಾರೆ ಶರಣ್. ತಮ್ಮ ಹಿಂದಿನ ‘ಅಧ್ಯಕ್ಷ’ ಸಿನಿಮಾದ ಮುಂದುವರಿದ ಭಾಗ ಇದಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಶರಣ್, ‘ಆದರೆ ಆ ಸಿನಿಮಾದಲ್ಲಿ ಪಾತ್ರದ ಗುಣ ಇದರಲ್ಲೂ ಒಂದಿಷ್ಟು ಇದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು