‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಗ್ಗೆ ಆರ್ಜಿವಿ, ರಾಣಾ ದಗ್ಗುಬಾಟಿ ಹೇಳಿದ್ದೇನು?

ಬೆಂಗಳೂರು: ನಟ ರಾಜ್ ಬಿ. ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಬಗ್ಗೆ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಟ ರಾಣಾ ದಗ್ಗುಬಾಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಅಭಿಮಾನಿಯೊಬ್ಬರು ರಾಣಾ ದಗ್ಗುಬಾಟಿ ಅವರನ್ನು ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ‘ಗರುಡ ಗಮನ ವೃಷಭ ವಾಹನ’ ವೀಕ್ಷಿಸಲು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಸಿನಿಮಾ ಅದ್ಭುತವಾಗಿದೆ. ನನಗೆ ಇಷ್ಟವಾಯಿತು!! ಎಂದು ಹೃದಯದ ಎಮೋಜಿಯೊಂದಿಗೆ ಪೋಸ್ಟ್ ಮಾಡಿದ್ದಾರೆ.
It’s awesome loved it!! ❤️ https://t.co/8uRGHV8tqF
— Rana Daggubati (@RanaDaggubati) January 20, 2022
ಇತ್ತೀಚಿಗೆ ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ರಾಮ್ ಗೋಪಾಲ್ ವರ್ಮಾ, ‘ಚಿತ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ಬಗ್ಗೆ ಹೊಗಳಲು ಹೊಸ ಪದಗಳನ್ನು ಬಳಸಿದ್ದಾರೆ. ಚಿತ್ರ ಮತ್ತೊಂದು ಲೆವೆಲ್ನಲ್ಲಿದೆ (Stratospheric) ರಾಜ್ ಪಾತ್ರಕ್ಕೆ ತಕ್ಕಂತೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಂಪೂರ್ಣ ರೂಪಾಂತರ (Metamorphic) ಹೊಂದಿದ್ದಾರೆ. ಇಡೀ ಚಿತ್ರ ‘ಅಲ್ಟ್ರಾಸ್ಕೋಪಿಕ್’ (ULTRASCOPIC) ಎಂದು ಬಣ್ಣಿಸಿದ್ದಾರೆ.
Hey @RajbShettyOMK ur film is just stratospheric and ur screen presence is metamorphic and the overall effect is ULTRASCOPIC https://t.co/4bMlAmKylH
— Ram Gopal Varma (@RGVzoomin) January 17, 2022
ಕಳೆದ ನವೆಂಬರ್ 19ರಂದು ‘ಗರುಡ ಗಮನ ವೃಷಭ ವಾಹನ’ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಒಟಿಟಿಯಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಓದಿ... ಗರುಡ ಗಮನ ವೃಷಭ ವಾಹನ ಸಿನಿಮಾ ವಿಮರ್ಶೆ: ಮಂಗಳಾದೇವಿಗೊಮ್ಮೆ ಹೋಗಿಬನ್ನಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.