ಮಂಗಳವಾರ, ಆಗಸ್ಟ್ 3, 2021
21 °C

ಐರಾ ಸಿನಿಮಾ: ದ್ವಿಪಾತ್ರದಲ್ಲಿ ನಯನತಾರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾರ್ಚ್ 28ರಂದು ತೆರೆಕಾಣಲಿರುವ ತಮಿಳು ಸಿನಿಮಾ ‘ಐರಾ‘ದಲ್ಲಿ ನಯನತಾರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. 

ಈ ಮೊದಲು ಅವರು ಕಂಡಿರದಂತಹ ವಿಚಿತ್ರವಾದ ಲುಕ್‌ನಲ್ಲಿ ಅವರನ್ನು ನೋಡಬಹುದು ಎಂದು ಸಿನಿಮಾ ತಂಡ ಹೇಳಿಕೊಂಡಿದೆ. 

ವಿಶೇಷ ಎಂದರೆ ಈ ಸಿನಿಮಾದಲ್ಲಿ ನಯನತಾರಾ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಹಳ್ಳಿ ಹುಡುಗಿ ರೀತಿಯ ಮೇಕಪ್‌, ಗದ್ದೆಯಲ್ಲಿ ಓಡಾಡುವ ಝಲಕ್‌, ಆಗಾಗ ಬಂದು ಕಾಡುವ ದೆವ್ವ ಎಲ್ಲವೂ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಕೆ.ಎಂ. ಸರ್ಜುನ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಯನತಾರಾ ಅವರೊಂದಿಗೆ ಕಲೈಯರಸನ್‌, ಯೋಗಿ ಬಾಬು ಕೂಡ ನಟಿಸಿದ್ದಾರೆ. ಕೋಟಪಾಡಿ ಜೆ.ರಾಜೇಶ್‌ ಅವರ ನಿರ್ಮಾಣವಿದೆ. 

ಜನವರಿ 5ರಂದು ಟೀಸರ್ ಬಿಡುಗಡೆಯಾಗಿತ್ತು. ಇದನ್ನು ನೋಡಿದ ಲಕ್ಷಾಂತರ ಜನರು ನಯನತಾರಾ ಅವರ ಭಿನ್ನವಾದ ಅಭಿವ್ಯಕ್ತಿಯನ್ನು ಕಾಣಲು ಕಾತರರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು