ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಐಶ್ವರ್ಯ ರಾಜೇಶ್ ಒಬ್ಬರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ತಮಗಾದ ಕಹಿ ಘಟನೆ ಬಗ್ಗೆ ಐಶ್ವರ್ಯ ಅವರು ಬಹಿರಂಗ ಪಡಿಸಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ದೂರದರ್ಶನ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದ ಐಶ್ವರ್ಯ ಅವರು ಸದ್ಯ ಟಾಪ್ ನಟಿಯರಲ್ಲಿ ಒಬ್ಬರು. ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಐಶ್ವರ್ಯ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಾದ ಕಹಿ ಘಟನೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

‘ನಟನಾ ಕ್ಷೇತಕ್ಕೆ ಆಗತಾನೆ ಬಂದಿದ್ದೆ. ಆಗ ನಾನು ತುಂಬಾ ಚಿಕ್ಕ ಹುಡುಗಿಯಾಗಿದ್ದೆ. ಚಿತ್ರೀಕರಣದ ಸಂದರ್ಭದಲ್ಲಿ ನಾನು ನನ್ನ ಸಹೋದರನನ್ನು ಕರೆದುಕೊಂಡು ಹೋಗಿದ್ದಾಗ ಛಾಯಾಗ್ರಾಹಕ ನನ್ನ ಸಹೋದರನನ್ನು ಹೊರಗೆ ಕುಳಿತುಕೊಳ್ಳಲು ಹೇಳಿದ್ದ. ನಂತರ ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಬಟ್ಟೆಯನ್ನು ಕಳಚಿಟ್ಟು ದೇಹವನ್ನು ತೋರಿಸಲು ಹೇಳಿದ್ದ. ಆ ಸಂದರ್ಭದಲ್ಲಿ ನನಗೆ ಈ ಇಂಡಸ್ಟ್ರಿ ಅಷ್ಟೊಂದು ಅರ್ಥವಾಗುತ್ತಿರಲಿಲ್ಲ. ಆಗ ಅದು ತಪ್ಪು ಎಂದು ಅರ್ಥವಾಯಿತು’ ಎಂದು ಆ ಘಟನೆ ಬಗ್ಗೆ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.