ಶುಕ್ರವಾರ, ನವೆಂಬರ್ 27, 2020
19 °C

ಅಮಿತಾಭ್‌ಗೆ ಆ್ಯಕ್ಷನ್ ಕಟ್ ಹೇಳಲಿರುವ ಅಜಯ್ ದೇವಗನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ–ನಿರ್ದೇಶಕ ಅಜಯ್ ದೇವಗನ್ ಬಾಲಿವುಡ್ ಬಿಗ್‌ ಬಿ ಅಮಿತಾಭ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ಮೇಡೇ’ ಶೀರ್ಷಿಕೆಯ ಈ ಚಿತ್ರಕ್ಕೆ ಅಜಯ್ ದೇವಗನ್ ನಿರ್ದೇಶನವಿದೆ.

ಹಿಂದೆ ‘ಶಿವಾಯ’ ಹಾಗೂ ‘ಯು ಮಿ ಔರ್ ಹಮ್’ ಚಿತ್ರವನ್ನು ಅಜಯ್ ನಿರ್ದೇಶನ ಮಾಡಿದ್ದರು. ಇದೇ ಮೊದಲ ಬಾರಿ ಅಜಯ್ ಅಮಿತಾಭ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದರಲ್ಲಿ ದೇವಗನ್ ಕೂಡ ನಟಿಸುತ್ತಿದ್ದು ಅವರು ಪೈಲೆಟ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಅಮಿತಾಭ್‌ ಅವರ ಪಾತ್ರದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಹಿಂದೆ ‘ಕಾಕಿ ಹಾಗೂ ಸತ್ಯಾಗ್ರಹ’ ಸಿನಿಮಾದಲ್ಲಿ ಅಮಿತಾಬ್ ಹಾಗೂ ಅಜಯ್ ಒಟ್ಟಾಗಿ ನಟಿಸಿದ್ದರು. ಅಜಯ್ಸ್ ಪ್ರೊಡಕ್ಷನ್ ಕಂಪನಿ ಹಾಗೂ ಅಜಯ್ ದೇವಗನ್ ಫಿಲ್ಮ್ಸ್ ಸಿನಿಮಾಕ್ಕೆ ಹಣ ಹೂಡಿಕೆ ಮಾಡಲಿವೆ. ಮೂಲಗಳ ಪ್ರಕಾರ ಸಿನಿಮಾದ ಶೂಟಿಂಗ್ ಡಿಸೆಂಬರ್‌ಗೆ ಆರಂಭವಾಗಲಿದೆ.

ಸದ್ಯ ಅಮಿತಾಭ್‌ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಝಂಡ್‌, ಚೆಹ್ರೆ ಹಾಗೂ ಬ್ರಹ್ಮಾಸ್ತ್ರ ಸಿನಿಮಾಗಳು ಅಮಿತಾಬ್ ಕೈಯಲ್ಲಿವೆ.

ಅಜಯ್‌ ‘ಭುಜ್‌: ದಿ ಪ್ರೈಡ್ ಆಫ್ ಇಂಡಿಯಾ’, ‘ಮೈದಾನ್’ ಹಾಗೂ ‘ಆರ್‌ಆರ್‌ಆರ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು