ಬೆಂಗಳೂರು:ಬಾಲಿವುಡ್‌ನ ತಾರಾ ದಂಪತಿ ಅಜಯ್ ದೇವಗನ್ ಮತ್ತು ಕಾಜೋಲ್ ತಮ್ಮ ಹೋಂ ಬ್ಯಾನರ್ ಅಡಿ ನಿರ್ಮಿಸಿ, ಲೀಡ್ ರೋಲ್‌ಗಳಲ್ಲಿ ಅಭಿನಯಿಸಿರುವ ‘ತಾನಾಜಿ: ದಿ ಅನ್‌ಸಂಗ್ ವಾರಿಯರ್’ ಬಿಡುಗಡೆಯಾದ ವಾರದಲ್ಲಿಯೇ ₹100 ಕೋಟಿ ಕ್ಲಬ್ ಸೇರಿದೆ. ಅಜಯ್ ದೇವಗನ್ ನಟಿಸಿರುವ ನೂರನೇ ಚಿತ್ರ ಇದಾಗಿದೆ.

ದೇಶ ಮತ್ತು ವಿದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ನಯನತಾರಾ ನಟನೆಯ ‘ದರ್ಬಾರ್’ ಕೂಡ ಕಮಾಲ್ ಮಾಡಿದ್ದು, ಮೊದಲ ವಾರ ₹150 ಕೋಟಿ ಗಳಿಸಿದೆ.

ಅಜಯ್ ದೇವಗನ್ ‘ತಾನಾಜಿ’ ಪಾತ್ರದಲ್ಲಿ ಅಬ್ಬರಿಸಿದರೆ, ಕಾಜೋಲ್ ತಾನಾಜಿಯ ಪತ್ನಿ ಸಾವಿತ್ರಿ ಬಾಯಿ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.ಓಂ ರಾವತ್ ನಿರ್ದೇಶಿಸಿದ ಚಿತ್ರದಲ್ಲಿ ಸೈಫ್ ಅಲಿಖಾನ್ ಖಳನಾಯಕನ ಪಾತ್ರದಲ್ಲಿ (ಉದಯಭಾನ್ ರಾಠೋಡ್) ಎಲ್ಲರ ಮನ ಗೆದ್ದಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ತಾನಾಜಿಗೆ ತೆರಿಗೆ ವಿನಾಯ್ತಿ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಅಜಯ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜನ ಸೇನಾಧಿಪತಿಯಾಗಿದ್ದ ತಾನಾಜಿ ಮಾಲುಸರೆ ಜೀವನ ಕತೆ ಆಧರಿಸಿದ ಐತಿಹಾಸಿಕ ಕಥಾಹಂದರ ಹೊಂದಿದೆ.

ಮತ್ತೊಂದೆಡೆ ದೀಪಿಕಾ ಪಡುಕೋಣೆ ನಟಿಸಿರುವ ‘ಛಪಾಕ್’ಗೆ ದೇಶದಾದ್ಯಂತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆಯಾದ 7 ದಿನಗಳಲ್ಲಿ ₹28.8ಕೋಟಿ ಬಾಚಿಕೊಂಡಿದೆ.‘ಛಪಾಕ್’ ಆ್ಯಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಅಗರವಾಲ್ ಜೀವನದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಕತೆಯಾಗಿದೆ. ಈ ಚಿತ್ರವನ್ನು ₹ 35 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.

ಬಿಜೆಪಿ ಮತ್ತು ಸಂಘ ಪರಿವಾರದ ಬಹಿಷ್ಕಾರ, ಬೆದರಿಕೆಯ ಹೊರತಾಗಿಯೂ ಚಿತ್ರ ಯಶಸ್ಸಿನತ್ತು ಮುನ್ನುಗ್ಗುತ್ತಿದೆ. ತಾನಾಜಿ ಮತ್ತು ಛಪಾಕ್ ಕಳೆದ ವಾರ ಬಿಡುಗಡೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.