ಗುರುವಾರ , ಅಕ್ಟೋಬರ್ 21, 2021
27 °C

'ಅಖಂಡ'ನಾಗಿ ಬಾಲಯ್ಯ: ’ಅಡಿಗಾ ಅಡಿಗಾ’ ಹಾಡಿಗೆ ಅಭಿಮಾನಿಗಳು ಫಿದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲುಗಿನಲ್ಲಿ ಮಾಸ್‌ ಸಿನಿಮಾಗಳಿಗೆ ಕೇರಾಫ್‌ ಅಡ್ರಸ್‌ ಅಂದ್ರೆ ಬಾಲಯ್ಯ ಅಲಿಯಾಸ್‌ ನಂದಮೂರಿ ಬಾಲಕೃಷ್ಣ. ಈ ಬಾಲಯ್ಯ ಮತ್ತೊಂದು ಮಾಸ್‌ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಬಾಲಯ್ಯ 'ಅಖಂಡ' ಆಗಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಸಿನಿಮಾದ ಬಗ್ಗೆ ಟಾಲಿವುಡ್‌ನಲ್ಲಿ ಟ್ರೆಂಡ್‌ ಶುರುವಾಗಿದೆ. ಈ ಸಿನಿಮಾದ ಮೊದಲ ಸಾಹಿತ್ಯಿಕ ವಿಡಿಯೊ ’ಅಡಿಗಾ ಅಡಿಗಾ’ ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. 

ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ ಅಡಿಗಾ ಅಡಿಗಾ ಹಾಡು.

ಖ್ಯಾತ ನಿರ್ದೇಶಕ ಬಾಯಿಪಾಟು ಸೀನು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು,  ರವೀಂದ್ರ ರೆಡ್ಡಿ  ನಿರ್ಮಾಣ ಮಾಡುತ್ತಿದ್ದಾರೆ.

ಪ್ರಜ್ಞ್ಯಾ ಜೈಸ್ವಾಲ್ ನಾಯಕಿಯಾದರೆ,  ಶ್ರೀಕಾಂತ್‌ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು