ಗುರುವಾರ , ಅಕ್ಟೋಬರ್ 28, 2021
18 °C

ಅಕ್ಷಯ್, ಅಜಯ್‌, ರಣವೀರ್‌ ನಟನೆಯ ’ಸೂರ್ಯವಂಶಿ’ ದೀಪಾವಳಿಗೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಅಂಗಳದಲ್ಲಿ ಭಾರೀ ಕುತೂಹಲ ಮೂಡಿಸಿರುವ ಸೂರ್ಯವಂಶಿ ಸಿನಿಮಾ ಬರುವ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 

ಅಕ್ಷಯ್, ಅಜಯ್‌, ರಣವೀರ್‌, ಕತ್ರಿನಾ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ತಯಾರಾಗಿರುವ ಈ ಸಿನಿಮಾ ಅಕ್ಟೋಬರ್‌ 22ರಂದು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ಎಂದು ಅಕ್ಷಯ್‌ ಕುಮಾರ್‌ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಈ ದೀಪಾವಳಿಗೆ ಅಕ್ಷಯ್‌ಕುಮಾರ್ ಆಕ್ಷನ್‌, ರಣವೀರ್‌ಸಿಂಗ್ ಕಾಮಿಡಿ, ಆಕ್ಷನ್, ಜತೆಗೆ ಸಿಂಗಂ ಖ್ಯಾತಿಯ ಅಜಯ್‌ ದೇವಗನ್‌ ಅವರ ಸ್ಟೈಲಿಷ್ ನಟನೆಯು ಅಭಿಮಾನಿಗಳಿಗೆ ರಸದೌತಣ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. 

’ಸೂರ್ಯವಂಶಿ‘ ಚಿತ್ರವು ಮುಂಬೈನಲ್ಲಿ 1993, 2002, 2006 ಮತ್ತು 2008ರಲ್ಲಿ ನಡೆದ ಸರಣಿ ಉಗ್ರರ ದಾಳಿಗಳ ಘಟನೆ ಆಧಾರಿತ ಸಿನಿಮಾ ಎಂದು ಹೇಳಲಾಗುತ್ತಿದೆ.  

ಸೂರ್ಯವಂಶಿ ಚಿತ್ರವನ್ನು ಕರಣ್‌ ಜೋಹರ್‌ ಮತ್ತು ರೋಹಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ರೋಹಿತ್ ಶೆಟ್ಟಿ ಆಕ್ಷನ್‌ ಕಟ್‌ ಹೇಳಿದ್ದಾರೆ.

ಸೂರ್ಯವಂಶಿ ಸಿನಿಮಾ ಬಿಡುಗಡೆಯನ್ನು ಕೋವಿಡ್‌ ಕಾರಣಕ್ಕೆ 2 ಸಲ ಮುಂದೂಡಲಾಗಿತ್ತು. ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ 22ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭವಾಗಲಿದೆ ಎಂದು ಅಲ್ಲಿನ ಸರ್ಕಾರ ಪ್ರಕಟಿಸಿದೆ. ಅದೇ ದಿನ ಸಿನಿಮಾ ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಕುಮಾರ್‌ ಹೇಳಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು