ಬುಧವಾರ, ಮೇ 18, 2022
24 °C

ತಾಯಿಯನ್ನು ನೆನೆದು ಭಾವನಾತ್ಮಕ ಪೋಸ್ಟ್ ಮಾಡಿದ ಅಕ್ಷಯ್ ಕುಮಾರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Akshay Kumar Instagram Post

ಬೆಂಗಳೂರು: ಕಳೆದ ಸೆಪ್ಟೆಂಬರ್‌ನಲ್ಲಿ ತಾಯಿಯನ್ನು ಕಳೆದುಕೊಂಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಸಾಮಾಜಿಕ ತಾಣದಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡುವ ಮೂಲಕ ಅಮ್ಮನನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ, ಸೆ. 8ರಂದು ಅನಾರೋಗ್ಯದಿಂದ ನಿಧನರಾಗಿದ್ದರು.

ತಾಯಿಯನ್ನು ಕಳೆದುಕೊಂಡ ಸಂದರ್ಭದಲ್ಲಿಯೂ ಅವರ ಕುರಿತು ಪೋಸ್ಟ್ ಮಾಡಿ ಮನದ ನೋವನ್ನು ವ್ಯಕ್ತಪಡಿಸಿದ್ದ ಅಕ್ಷಯ್ ಕುಮಾರ್, ಈಗ ಮತ್ತೆ ತಾಯಿಯ ಕುರಿತು ಬರೆದಿದ್ದು, ಯಾಕೋ ಅಮ್ಮ ಇಂದು ತುಂಬಾ ನೆನಪಾಗುತ್ತಿದ್ದಾಳೆ. ಆಕೆ ಇರಬೇಕಿತ್ತು ಎನ್ನಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.

20 ಸೆಕೆಂಡ್‌ಗಳ ವಿಡಿಯೊ ಒಂದನ್ನು ಅಕ್ಷಯ್ ಕುಮಾರ್ ಶೇರ್ ಮಾಡಿದ್ದು, ಅದರಲ್ಲಿ ಅತೀವ ಬೇಸರದಲ್ಲಿ ಇರುವಂತೆ ಕಾಣಿಸುತ್ತಿದೆ.

ಅಕ್ಷಯ್ ಕುಮಾರ್ ಅವರ ಪೋಸ್ಟ್ ಗಮನಿಸಿದ ಅಭಿಮಾನಿಗಳು, ನೀವು ಬೇಸರಿಸಬೇಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು