ಶುಕ್ರವಾರ, ನವೆಂಬರ್ 22, 2019
27 °C

ಬೆಲ್‌ ಬಾಟಂ ಚಿತ್ರದ ಹಿಂದಿ ರಿಮೇಕ್‌ಗೆ ಅಕ್ಷಯ್‌ ಕುಮಾರ್‌ ನಾಯಕ

Published:
Updated:

ಬೆಂಗಳೂರು: 2019ರ ಸ್ಯಾಂಡಲ್‌ವುಡ್‌ನ ಹಿಟ್‌ ಚಿತ್ರಗಳಲ್ಲಿ ಒಂದಾದ ಬೆಲ್‌ ಬಾಟಂ ಹಿಂದಿಗೆ ರಿಮೇಕ್‌ ಆಗಲಿದ್ದು, ನಟ ಅಕ್ಷಯ್‌ ಕುಮಾರ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಜಯತೀರ್ಥ ನಿರ್ದೇಶನದ ಬೆಲ್‌ ಬಾಟಂ ಚಿತ್ರಕ್ಕೆ ಟಿ. ಕೆ. ದಯಾನಂದ್‌ ಕತೆ ಬರೆದಿದ್ದರು. ರಿಶಬ್‌ ಶೆಟ್ಟಿ ಮತ್ತು ಹರಿಪ್ರಿಯಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 80ರ ದಶಕದ ರೆಟ್ರೋ ಶೈಲಿಯ ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದ ಚಿತ್ರವು ಪ್ರೇಕ್ಷಕರ ಮನಸೂರೆಗೊಂಡಿತ್ತು. 

ಬೆಲ್‌ ಬಾಟಂ ಚಿತ್ರವನ್ನು ಮೆಚ್ಚಿದ್ದ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದ ಕೆಲ ನಿರ್ಮಾಪಕರು ರಿಮೇಕ್‌ ಹಕ್ಕುಗಳನ್ನು ಪಡೆದುಕೊಂಡಿದ್ದ ಬಗ್ಗೆ ಈ ಹಿಂದೆ ವರದಿಯಾಗಿತ್ತು. ಈ ಚಿತ್ರದ ಕತೆಯನ್ನು ಬಹುವಾಗಿ ಮೆಚ್ಚಿದ್ದ ಹಿಂದಿ ಚಿತ್ರ ತಯಾರಕ ನಿಖಿಲ್‌ ಅಡ್ವಾನಿ ಅವರು ನಟ ಅಕ್ಷಯ್‌ ಜೊತೆ ಸೇರಿ ನಿರ್ಮಾಣ ಮಾಡಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಕ್ಷಯ್‌ ಕುಮಾರ್ ನಟಿಸಲಿದ್ದು, ರಂಜಿತ್‌ ತಿವಾರಿ ನಿರ್ದೇಶನ ಮಾಡಲಿದ್ದಾರೆ.  

ಪ್ರತಿಕ್ರಿಯಿಸಿ (+)