ಗುರುವಾರ , ಅಕ್ಟೋಬರ್ 29, 2020
28 °C

ದೀಪಾವಳಿಗೆ ಬಿಡುಗಡೆಯಾಗುತ್ತಿಲ್ಲ ಅಕ್ಷಯ್ ನಟನೆಯ ಸೂರ್ಯವಂಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ಸೂಪರ್‌ಸ್ಟಾರ್‌ ಅಕ್ಷಯ್‌ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಸೂರ್ಯವಂಶಿ’. ಈ ಚಿತ್ರವನ್ನು ದೀಪಾವಳಿಗೆ ಬಿಡುಗಡೆ ಮಾಡುವ ಯೋಚನೆಯಲ್ಲಿತ್ತು ಚಿತ್ರತಂಡ. ಆದರೆ ಈ ಚಿತ್ರ ‘ದೀಪಾವಳಿಗೆ ಬಿಡುಗಡೆಯಾಗುತ್ತಿಲ್ಲ’ ಎಂದಿದ್ದಾರೆ ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ ಗ್ರೂಪ್‌ನ ಸಿಇಒ ಸಿಬಾಷಿಶ್‌ ಸರ್ಕಾರ್‌. 

ಕಳೆದ ಜೂನ್‌ನಲ್ಲಿ ಸಿನಿಮಾವನ್ನು ದೀಪಾವಳಿಗೆ ಬಿಡುಗಡೆ ಮಾಡಲಿದ್ದೇವೆ ಎಂದು ಘೋಷಿಸಿತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ. ಅದರೊಂದಿಗೆ ಈ ಸಂಸ್ಥೆ ನಿರ್ಮಾಣದ ರಣವೀರ್ ಸಿಂಗ್‌ ನಟನೆಯ ‘83’ ಸಿನಿಮಾ ಡಿಸೆಂಬರ್‌ಗೆ ಬಿಡುಗಡೆಯಾಗಲಿದೆ ಎಂದಿದ್ದರು. ಆದರೆ ಈಗ ಎರಡೂ ಸಿನಿಮಾಗಳ ಬಿಡುಗಡೆಯ ದಿನಾಂಕ ವ್ಯತ್ಯಾಸವಾಗುವ ಲಕ್ಷಣಗಳು ಕಾಣುತ್ತಿವೆ. 

ಅಕ್ಟೋಬರ್‌ 15 ರಿಂದ ಥಿಯೇಟರ್‌ಗಳ ಪುನಾರಾರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಶೇ 50 ರಷ್ಟು ಮಂದಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ಕೆಲವೊಂದು ಅನಿಶ್ಚಿತತೆಯ ಕಾರಣದಿಂದ ಸೂರ್ಯವಂಶಿ ಸಿನಿಮಾವನ್ನು ದೀಪಾವಳಿಗೆ ಬಿಡುಗಡೆ ಮಾಡುತ್ತಿಲ್ಲ. 

ಈ ಬಗ್ಗೆ ಮಾತನಾಡಿರುವ ಸರ್ಕಾರ್‌ ‘ನಾವು ಸೂರ್ಯವಂಶಿ ಸಿನಿಮಾವನ್ನು ದೀಪಾವಳಿಗೆ ಬಿಡುಗಡೆ ಮಾಡುತ್ತಿಲ್ಲ ಎಂಬುದು ಸ್ಪಷ್ಟ. ಈ ಬಗ್ಗೆ ನಮ್ಮ ನಿರ್ಧಾರ ಬದಲಾಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡುವುದು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.

ಈ ಸಿನಿಮಾ ಬಿಡುಗಡೆಯ ಕುರಿತು ನಿರ್ಮಾಪಕರು ಇನ್ನೂ ಬಿಡುಗಡೆಯ ದಿನಾಂಕ ಗೊತ್ತು ಮಾಡಿಲ್ಲ ಎಂದಿದ್ದಾರೆ.

‘ಒಂದು ವೇಳೆ ಸೂರ್ಯವಂಶಿ ಹಾಗೂ 83 ಎರಡೂ ಸಿನಿಮಾಗಳ ಬಿಡುಗಡೆ ದಿನಾಂಕ ವ್ಯತ್ಯಾಸ ಆಗಬಹುದು. ಆದರೆ ಖಂಡಿತ ಡಿಸೆಂಬರ್‌ನಿಂದ ಮಾರ್ಚ್‌ ಒಳಗೆ ಸಿನಿಮಾ ಬಿಡುಗಡೆಯಾಗಲಿದೆ’ ಎಂದಿದ್ದಾರೆ.

ರೋಹಿತ್‌ ಶೆಟ್ಟಿ ನಿರ್ದೇಶನದ ಈ ಸಿನಿಮಾ ಮೊದಲು ಮಾರ್ಚ್‌ 24ಕ್ಕೆ ಬಿಡುಗಡೆಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು