ಹೈದರಾಬಾದ್: ತೆಲುಗಿನ ಸ್ಟೈಲಿಶ್ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಮುಲೋ’ ಚಿತ್ರದ ಟ್ರೇಲರ್ ಯುಟ್ಯೂಬ್ನಲ್ಲಿ ಬಿಡುಗಡೆಯಾಗಿದೆ.

ಮಹೇಶ್ ಬಾಬು ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ‘ಸರಿಲೇರು ನೀಕೆವ್ವರು’ ಚಿತ್ರದಟ್ರೇಲರ್ ಕೂಡ ನಿನ್ನೆ ಬಿಡುಗಡೆಯಾಗಿದ್ದು ಯುಟ್ಯೂಬ್ ಟ್ರೆಂಡಿಂಗ್ನಲ್ಲಿ ಮೊದಲ ಸ್ಥಾನದಲ್ಲಿದೆ. ಇದನ್ನು 10 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.ಅಲಾ ವೈಕುಂಠಪುರಮುಲೋ ಚಿತ್ರದ ಟ್ರೇಲರ್ ಸಹ ನಿನ್ನೆ ಬಿಡುಗಡೆಯಾಗಿದ್ದು 6 ಲಕ್ಷ ವ್ಯೂ ಪಡೆಯುವ ಮೂಲಕ ಯುಟ್ಯೂಬ್ ಟ್ರೆಂಡಿಂಗ್ನಲ್ಲಿ ಎರಡನೇ ಸ್ಥಾನದಲ್ಲಿದೆ.

ಸರಿಲೇರು ನೀಕೆವ್ವರು ಚಿತ್ರ ಜನವರಿ 11ರಂದು ಬಿಡುಗಡೆಯಾದರೆ,ಅಲಾ ವೈಕುಂಠಪುರಮುಲೋ ಸಿನಿಮಾ ಜನವರಿ 12ರಂದು ಬಿಡುಗಡೆಯಾಗಲಿದೆ. ಈ ಎರಡು ಚಿತ್ರಗಳಲ್ಲಿ ನಟಿಸಿರುವ ನಾಯಕಿಯರು ಕನ್ನಡದವರು ಎಂಬುದು ವಿಶೇಷ.

‘ಮಾತಿನ ಮಾಂತ್ರಿಕ’ ಎಂದೇ ಖ್ಯಾತರಾಗಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅಲಾ ವೈಕುಂಠಪುರಮುಲೋ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ಅಲ್ಲು ಅರ್ಜುನ್ಗೆ ನಾಯಕಿಯಾಗಿ ಕನ್ನಡದ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿಟಬು, ವೆನ್ನೆಲ ಕಿಶೋರ್, ರಾಜೇಂದ್ರ ಪ್ರಸಾದ್, ಎನ್.ಪೇತುರಾಜ್, ಸುನೀಲ್, ನವದೀಪ್ ನಟಿಸಿದ್ದಾರೆ.

ಅಲ್ಲು ಅರ್ಜುನ್ ಜೊತೆಗೂಡಿ ಜುಲಾಯಿ, ಸನ್ ಆಫ್ ಸತ್ಯಮೂರ್ತಿ ಯಂತಹ ಉತ್ತಮ ಚಿತ್ರಗಳನ್ನು ನೀಡಿದ್ದ ತ್ರಿವಿಕ್ರಮ್ ಈಗ ಅಲಾ ವೈಕುಂಠಪುರಮುಲೋ ಚಿತ್ರದ ಮೂಲಕ ಮತ್ತೊಂದು ಹಿಟ್ ಚಿತ್ರ ನೀಡಲು ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.