ಬುಧವಾರ, ಆಗಸ್ಟ್ 4, 2021
20 °C

ಹೊಸ ಮನೆಯ ವಿಭಿನ್ನವಾಗಿ ವಿನ್ಯಾಸ ಮಾಡಿದ ಆಲಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಆಲಿಯಾ ಭಟ್‌ ಅಪಾರ್ಟ್‌ವೊಂದರಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಮೂರು ಬೆಡ್‌ ರೂಮಿನ  ಮನೆ ಅದು. ಮನೆಯಲ್ಲಿ ಸಹೋದರಿ ಶಾಹೀನ್‌ ಭಟ್‌ ಜತೆ ವಾಸ ಮಾಡ್ತಿದ್ದಾರೆ. ಈ ಮನೆಯ ಒಳಾಂಗಣ ವಿನ್ಯಾಸ ವಿಭಿನ್ನವಾಗಿದ್ದು, ಮನೆಯ ಸಣ್ಣಸಣ್ಣ ಸ್ಥಳಕ್ಕೂ ಮಹತ್ವ ನೀಡಿ ವಿನ್ಯಾಸ ಮಾಡಲಾಗಿದೆ. ರಿಚಾ ಬಹ್ಲ್‌ ವಿನ್ಯಾಸ ಮಾಡಲು ಸಹಾಯ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆಯೇ ಈ ಮನೆಯನ್ನು ಖರೀದಿಸಿದ್ದರು. ನಾಲ್ಕು ಬೆಡ್‌ ರೂಮಿನ ಮನೆಯನ್ನು ಮೂರು ಬೆಡ್‌ ರೂಮ್‌ಗಳಾಗಿ ವಿಂಗಡಿಸಿ, ಹಾಲ್‌ ಸೇರಿದಂತೆ ಆಫೀಸ್‌ ಕೊಠಡಿಯೊಂದನ್ನು ಮಾಡಿಕೊಂಡಿದ್ದಾರೆ.

ಒಂದೂವರೆ ವರ್ಷದಿಂದ ಒಳಾಂಗಣ ವಿನ್ಯಾಸದ ಕೆಲಸ ನಡೆಯುತ್ತಲೇ ಇದೆ. ಇವರ ಹೋಂ ಆಫೀಸ್‌ ವಿನ್ಯಾಸ ಮಾಡಿದವರು ’ಡಿಯರ್ ಜಿಂದಗಿ‘ ಸಿನಿಮಾದ ಕಲಾ ನಿರ್ದೇಶಕ ರುಪಿನ್ ಸುಚಕ್. ಈ ಸ್ಥಳಕ್ಕೆ ಆಲಿಯಾ ’ಎಟರ್ನಲ್ ಸನ್‌ಸೈನ್‘ ಎಂದು ಹೆಸರಿಟ್ಟಿದ್ದಾರೆ. ವಾಕ್ಇ‌ನ್ ವಾಡ್‌ರೊಪ್ ಜತೆ ದೊಡ್ಡದಾದ ಮೇಕಪ್‌ ರೂಮ್ ಇರೋದು ಈ ಮನೆಯ ಪ್ರಮುಖ ಆಕರ್ಷಣೆ.

ಅರೆ ಆಲಿಯಾ ಭಟ್ ಹೊಸ ಮನೆಯ ಮಾಹಿತಿ ಹೇಗೆ ಗೊತ್ತಾಯ್ತು ಅಂತ ಕೇಳ್ತಿದ್ದೀರಾ.. ಆಲಿಯಾ ಭಟ್‌ ಹೊಸ ಮನೆ ಖರೀದಿಸಿದ್ದರಿಂದ ಹಿಡಿದು, ಇಲ್ಲಿಯವರೆಗೆ ಪ್ರತಿ ಹಂತದ ಬೆಳವಣಿಗೆಯನ್ನು ವಿಡಿಯೊ ಮಾಡಿ ತನ್ನ ಯುಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಮನೆಯ ಬಗ್ಗೆ ’ಹೋಮ್‌ ಆನ್ ವೀಲ್ಸ್‌‘ ಎಂದು ಕರೆದುಕೊಂಡಿದ್ದಾರೆ. ಹಾಗೇ ತಮ್ಮ ಹೊಸ ಮನೆಯಲ್ಲಿ ಅಡುಗೆ ಮಾಡಿದ್ದನ್ನು ’ಇನ್‌ ಮೈ ಕಿಚನ್‘ ಎಂಬ ಸರಣಿ ವಿಡಿಯೊಗಳನ್ನಾಗಿ ಮಾಡಿ ಹಂಚಿಕೊಂಡಿದ್ದರು. ಈ ವಿಡಿಯೊಗಳನ್ನು ಹೆಚ್ಚು ಸಂಖ್ಯೆಯನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು