ತನ್ನ ಹದಿನೈದನೇ ವಯಸ್ಸಿಗೆ ಬಾಲಿವುಡ್ನ ‘ಚಾಂದ್ ಸಾ ರೋಶನ್ ಚೆಹ್ರಾ’ ಸಿನಿಮಾದ ಮೂಲಕ ನಾಯಕಿಯಾಗಿ ನಟನೆ ಆರಂಭಿಸುತ್ತಾರೆ ತಮನ್ನಾ ಭಾಟಿಯಾ.ಆನಂತರ ಟಾಲಿವುಡ್ ಹಾಗೂ ಕಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಮಿಲ್ಕಿಬ್ಯೂಟಿ ಹಿಂದಿರುಗಿ ನೋಡಲೇ ಇಲ್ಲ. ತೆಲುಗು ಹಾಗೂ ತಮಿಳಿನ ಸ್ಟಾರ್ ನಾಯಕರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಯಶಸ್ವಿ ನಟಿ ಎನ್ನಿಸಿಕೊಳ್ಳುತ್ತಾರೆ. ಭಾರತೀಯ ಸಿನಿರಂಗದಲ್ಲೇ ಇತಿಹಾಸ ಸೃಷ್ಟಿಸಿದ ‘ಬಾಹುಬಲಿ’ ಸಿನಿಮಾದಲ್ಲೂ ಈಕೆ ನಟಿಸಿದ್ದರು. ಈ ನಡುವೆ ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ತಮನ್ನಾ ‘ಕೆಜಿಎಫ್’ ಸಿನಿಮಾದಲ್ಲೂ ಸೊಂಟ ಬಳುಕಿಸಿದ್ದಾರೆ.

ಇಂತಿಪ್ಪ ತಮನ್ನಾ ಹಣಕ್ಕಾಗಿ ಐಟಂ ಹಾಡು ಮಾಡುತ್ತಿದ್ದಾರೆ ಎಂಬ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಜೊತೆಗೆ ಹಣ ಮಾಡುವ ಉದ್ದೇಶದಿಂದ ನಾನು ಐಟಂ ಹಾಡುಗಳಿಗೆ ಸಹಿ ಹಾಕುತ್ತಿಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.

‘ಐಟಂ ಹಾಡುಗಳಿಗೆ ನರ್ತಿಸಿದರೆ ಹೆಚ್ಚು ಹಣ ಗಳಿಸಬಹುದು, ಆ ಕಾರಣಕ್ಕೆ ನಾನು ಐಟಂ ಹಾಡುಗಳಿಗೆ ಸಹಿ ಹಾಕುತ್ತಿದ್ದೇನೆ ಎಂಬ ಮಾಧ್ಯಮಗಳ ವರದಿಯನ್ನು ನೋಡಿದೆ. ಜೊತೆಗೆ ಕೆಲವರು ನನಗೆ ದುರಾಸೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಸತ್ಯ ಏನೆಂದರೆ ನನಗೆ ಡಾನ್ಸ್ ಎಂದರೆ ತುಂಬಾ ಇಷ್ಟ. ತೆರೆ ಮೇಲೆ ನರ್ತಿಸುವುದು ಎಂದರೆ ಬಹಳ ಪ್ರೀತಿ. ನಾನು ರೊಮ್ಯಾಂಟಿಕ್ ಹಾಡು ಅಥವಾ ಐಟಂ ಹಾಡು ಎಂಬುದನ್ನು ಲೆಕ್ಕಿಸದೇ ಜನರನ್ನು ರಂಜಿಸುತ್ತೇನೆ. ಅದೇ ನನಗೆ ಇಷ್ಟ’ ಎಂದು ಸಾಮಾಜಿಕ ಜಾಲತಾಣವೊಂದರಲ್ಲಿ ಅಭಿಮಾನಿಗಳ ಜೊತೆ ನಡೆಸಿದ ಸಂಭಾಷಣೆ ಒಂದರಲ್ಲಿ ತಿಳಿಸಿದ್ದಾರೆ ಈ ಬಾಂಬೆ ಬೆಡಗಿ.

‘ನಾನು ನನ್ನ ಕೊನೆ ಉಸಿರು ಇರುವವರೆಗೂ ಸಿನಿಮಾಗಳಲ್ಲಿ ನಟಿಸುತ್ತಲೇ ಇರುತ್ತೇನೆ. ನಾನು 13ನೇ ವಯಸ್ಸಿಗೆ ನಟನೆ ಆರಂಭಿಸಿದೆ. ಇಲ್ಲಿಯವರೆಗೆ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಒಂದೇ ರೀತಿಯ ಪಾತ್ರಗಳನ್ನು ಮಾಡಿಲ್ಲ. ನನಗೆ ಸಿನಿಮಾ ಎಂದರೆ ಹುಚ್ಚು. ಇನ್ನೂ ಬೇರೆ ಬೇರೆ ರೀತಿಯ ಪಾತ್ರಗಳಿಗೆ ಜೀವ ತುಂಬುವಾಸೆ’ ಎನ್ನುವ ಮೂಲಕ ಸಿನಿಮಾದ ಮೇಲಿನ ಅಭಿಮಾನವನ್ನು ಹೊರ ಹಾಕಿದ್ದಾರೆ.

ಸದ್ಯ ತೆಲುಗಿನ ‘ಸೀಟಿಮಾರ್’ ಮತ್ತು ‘ದಟ್ ಇಸ್ ಮಹಾಲಕ್ಷ್ಮಿ’ ಹಾಗೂ ಹಿಂದಿಯ ‘ಬೋಲೆ ಚೂಡಿಯಾ’ ಚಿತ್ರಗಳು ತಮನ್ನಾ ಕೈಯಲ್ಲಿವೆ.

’ಸೀಟಿಮಾರ್’ ಚಿತ್ರದಲ್ಲಿ ಗೋಪಿಚಂದ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ತಮನ್ನಾ ‘ನಾನು ಶೂಟಿಂಗ್ ಅನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಜೊತೆಗೆ ಮರಳಿ ಶೂಟಿಂಗ್ನಲ್ಲಿ ಭಾಗವಹಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.