ಗುರುವಾರ , ಮೇ 26, 2022
27 °C

ಅಮೆಜಾನ್ ಪ್ರೈಮ್​ನಿಂದ ಆಫರ್​: ಪುನೀತ್‌ ಸ್ಮರಣೆಗಾಗಿ ಉಚಿತ ಸಿನಿಮಾ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುನೀತ್‌ ರಾಜ್‌ಕುಮಾರ್ ನೆನಪಿಗಾಗಿ ಅವರ ಪಿಆರ್‌ಕೆ ಸ್ಟುಡಿಯೋ ನಿರ್ಮಾಣದ ಮೂರು ಸಿನಿಮಾಗಳ ವಿಶೇಷ ಪ್ರೀಮಿಯರ್‌ ಹಾಗೂ ಪುನೀತ್‌ ಅವರ ಐದು ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಅಮೆಜಾನ್ ಪ್ರೈಮ್ ವಿಡಿಯೊ ಘೋಷಿಸಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್‌ನ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’, ‘ಒನ್‌ ಕಟ್‌ ಟು ಕಟ್’ ಮತ್ತು ‘ಫ್ಯಾಮಿಲಿ ಪ್ಯಾಕ್‌’ ಸಿನಿಮಾಗಳು ಅಮೆಜಾನ್‌ ಪ್ರೈಮ್‌ನಲ್ಲಿ ಉಚಿತ ವೀಕ್ಷಣೆಗೆ ಲಭ್ಯವಿವೆ ಎಂದು ಅಮೇಜಾನ್​ ವಕ್ತಾರರು ತಿಳಿಸಿದ್ದಾರೆ. 

ಉಚಿತ ಪ್ರದರ್ಶನ ಎಕ್ಸ್‌ಕ್ಲೂಸಿವ್ ವರ್ಲ್ಡ್‌ ಪ್ರೀಮಿಯರ್ ಅನ್ನು ಪ್ರೈಮ್‌ ವಿಡಿಯೊ ಘೋಷಿಸಿದೆ.

ಪುನೀತ್‌ ಅಭಿನಯದ ಐದು ಚಿತ್ರಗಳು ಫೆ.1ರಿಂದ ಉಚಿತ ಪ್ರಸಾರ ನಡೆಯಲಿದೆ. ಪುನೀತ್‌ ನಿರ್ಮಾಣದ ‘ಕವಲುದಾರಿ’, ‘ಮಾಯಾ ಬಜಾರ್​’, ‘ಲಾ’, ‘ಫ್ರೆಂಚ್​ ಬಿರಿಯಾನಿ’, ಹಾಗೂ ಅವರದೇ ಅಭಿನಯದ ‘ಯುವರತ್ನ’ ಉಚಿತ ಪ್ರಸಾರವಾಗಲಿದೆ. ಫೆ. 28ರವರೆಗೆ ಉಚಿತ ವೀಕ್ಷಣೆ ಸೌಲಭ್ಯ ಇದೆ ಎಂದು ಅಮೆಜಾನ್ ಪ್ರೈಮ್ ತಿಳಿಸಿದೆ.

ಓದಿ... ‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಗ್ಗೆ ಆರ್‌ಜಿವಿ, ರಾಣಾ ದಗ್ಗುಬಾಟಿ ಹೇಳಿದ್ದೇನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು