ಮಂಗಳವಾರ, ಅಕ್ಟೋಬರ್ 15, 2019
26 °C

77ನೇ ಹುಟ್ಟು ಹಬ್ಬ: ಅಭಿಮಾನಿಗಳು ಹೃದಯದಲ್ಲಿ ನೆಲೆಸಿದ್ದೀರೆಂದ ಅಮಿತಾಭ್‌ ಬಚ್ಚನ್

Published:
Updated:
Prajavani

ಮುಂಬೈ: ಹಿರಿಯ ಚಿತ್ರನಟ ಅಮಿತಾಭ್‌ ಬಚ್ಚನ್‌ ಅವರಿಗೆ ಇಂದು(ಅ.11, ಶುಕ್ರವಾರ) 77ನೇ ಹುಟ್ಟು ಹಬ್ಬದ ಸಂಭ್ರಮ.

ಅಮಿತಾಭ್‌ ಬಚ್ಚನ್‌ ಅವರ ಹುಟ್ಟು ಹಬ್ಬದಂದು ಅಭಿಮಾನಿಗಳು ಶುಭಾಶಯ ಕೋರಲು ಮುಂಬೈನ ಅವರ ನಿವಾಸದ ಮುಂದೆ ಜಮಾಯಿಸಿದ್ದಾರೆ.

ಈ ವೇಳೆ ಮನೆಯಿಂದ ಹೊರ ಬಂದ ಅಮಿತಾಭ್‌ ಬಚ್ಚನ್‌ ಅವರು ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದ ತಿಳಿಸಿದರು.

ಧನ್ಯವಾದ ಹೇಳಿದ ಬಿಗ್‌ ಭೀ...

ನನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ಕಳುಹಿಸಿದ, ಕೋರಿದ ಎಲ್ಲರಿಗೂ ಕೃತಜ್ಞತೆಗಳು. ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳಲು ಸಾಧ್ಯವಾಗುತ್ತಿಲ್ಲ.... ಆದರೆ, ನೀವೆಲ್ಲರೂ ನನ್ನ ಹೃದಯದಲ್ಲಿ ನೆಲೆಸಿದ್ದೀರಿ... ನಿಮಗೆ ನನ್ನ ಪ್ರೀತಿಯ ನಮಸ್ಕಾರ ಎಂದು ಅಮಿತಾಭ್‌ ಬಚ್ಚನ್ ಅವರು ಟ್ವೀಟ್‌ ಮಾಡಿದ್ದಾರೆ.   

ಚಿತ್ರನಟನಾಗಬೇಕೆಂದು ಹುಟ್ಟೂರನ್ನು ಬಿಟ್ಟು ಮುಂಬೈಗೆ ಬಂದಿದ್ದ ಅಮಿತಾಭ್‌ ಬಚ್ಚನ್‌ ಮುಂಬೈಯಲ್ಲೇ ಉಳಿದು, ಹಲವು ರಾತ್ರಿಗಳನ್ನು ಮುಂಬೈಯ ಚೌಪಾಟಿಯಲ್ಲಿ, ರೈಲ್ವೆ ನಿಲ್ದಾಣದಲ್ಲಿ ಕಳೆದಿದ್ದ ಅವರಿಗೆ, 1969ರಲ್ಲಿ ಅವಕಾಶವೊಂದು ಒದಗಿಬಂದಿತ್ತು. ಆ ವರ್ಷ ‘ಸಾತ್‌ ಹಿಂದೂಸ್ತಾನಿ’ ಸಿನಿಮಾದ ಮೂಲಕ ಅವರು ಬೆಳ್ಳಿತೆರೆ ಪ್ರವೇಶಿಸಿದರು.

Post Comments (+)