ಬುಧವಾರ, ಜೂನ್ 29, 2022
23 °C

ಅಭಿಮಾನಿಯ ಬೆಲೆಕಟ್ಟಲಾಗದ ಮಂದಹಾಸ: ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ಅಮಿತಾಭ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಅಭಿಮಾನಿಗಳ ದಂಡೇ ಇದೆ. ಅದರಲ್ಲೂ 80ರ ದಶಕದಲ್ಲಿ ಅವರು ಸಿನಿಮಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಅಭಿಮಾನಿಗಳು ಅವರನ್ನು ಕಂಡರೆ ಮುಗಿಬೀಳುತ್ತಿದ್ದರು. ಅಂತಹ ಒಂದು ಅಪರೂಪದ ಸಂದರ್ಭದ ಚಿತ್ರವನ್ನು ಬಚ್ಚನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳ ಪ್ರೀತಿ, ಪ್ರಶಂಸೆ, ಭಾವೋದ್ವೇಗದ ಥ್ರೋ ಬ್ಯಾಕ್ ಚಿತ್ರ ಇದಾಗಿದೆ.

1979ರಲ್ಲಿ ತಮ್ಮ‘ಕಾಲ ಪತ್ತರ್’ ಚಿತ್ರದ ಪ್ರೀಮಿಯರ್‌ಗಾಗಿ ಲಂಡನ್‌ನ ವೆಬ್ಲೆಗೆ ತೆರಳಿದ್ದ ಅಮಿತಾಬ್ ಬಚ್ಚನ್ ಅವರನ್ನು ನೋಡಲು ಅಪಾರ ಅಭಿಮಾನಿಗಳು ನೆರೆದಿದ್ದರು. ಹತ್ತಿರದಿಂದ ತಮ್ಮ ಆರಾಧ್ಯ ನಟನನ್ನು ಕಂಡ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರೀತಿ ತುಂಬಿದ ಕಣ್ಣುಗಳಿಂದ ಅಭಿಮಾನಿಯೊಬ್ಬರು ತಮ್ಮ ಜೊತೆ ಮಾತನಾಡುತ್ತಿರುವ ಚಿತ್ರವನ್ನು ಬಿಗ್ ಬಿ ಹಂಚಿಕೊಂಡಿದ್ದಾರೆ.

ಆಟೋಗ್ರಾಫ್ ನೀಡಲು ಅಮಿತಾಬ್ ಅನುಮತಿ ಕೊಟ್ಟ ಕೂಡಲೇ ಪುಟ್ಟ ಅಭಿಮಾನಿ ಮುಖದ ಸಂತಸ, ಭಾವನೆಗಳ ಬಗ್ಗೆ ಅಮಿತಾಬ್ ಇದು ಬೆಲೆಕಟ್ಟಲಾಗದ್ದು ಎಂದು ಬಣ್ಣಿಸಿದ್ದಾರೆ.

ಇದೇ ಚಿತ್ರದಲ್ಲಿ ದಿವಂಗತ ಹಿಂದಿ ಚಿತ್ರರಂಗದ ದಂತಕಥೆ ನಟ ಶಶಿ ಕಪೂರ್ ಅವರನ್ನೂ ಕಾಣಬಹುದು. ಚಿತ್ರ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.

‘ನಾನು ನಿಮ್ಮನ್ನು ಎಂದಾದರೂ ಭೇಟಿಯಾಗಬೇಕೆಂಬುದು ನನ್ನ ಕನಸು. ಹೇಗೆ ಸಾಧ್ಯ? ನಾನು ಈಗ ಅಳುತ್ತಿದ್ದೇನೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಚಿತ್ರದಲ್ಲಿರುವ ಅಭಿಮಾನಿ ಮಂದಹಾಸ ಬೀರುತ್ತಾ ನಿಮ್ಮತ್ತ ನೋಡುತ್ತಿದ್ದರೆ ನೀವು ಏಕೆ ಅವರನ್ನು ನೋಡಿ ನಗೆ ಬೀರಲಿಲ್ಲ ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮೂಲಕ ಪ್ರಶ್ನಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು