ಮೈನಸ್ 33 ಡಿಗ್ರಿ ಸೆಲ್ಸಿಯಸ್ ಮೈಕೊರೆವ ಚಳಿಯಲ್ಲಿ ಅಮಿತಾಬ್ ಬಚ್ಚನ್!

ನವದೆಹಲಿ: ಕುತೂಹಲಕಾರಿ ಟ್ವೀಟ್ ಮೂಲಕ ಗಮನ ಸೆಳೆಯುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಈ ಬಾರಿ ಲಡಾಖ್ನ ಮೈಕೊರೆವ ಮೈಕೊರೆವ ಮೈನಸ್ 33 ಡಿಗ್ರಿ ಸೆಲ್ಸಿಯಸ್ ತಾಪಮಾನದ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ಜಾಹೀರಾತೊಂದರ ಚಿತ್ರೀಕರಣಕ್ಕೆ ಮೈನಸ್ 33 ಡಿಗ್ರಿ ತಾಪಮಾನವಿರುವ ಲಡಾಖ್ಗೆ ತೆರಳಿದ್ದ 78 ವರ್ಷದ ಅಮಿತಾಬ್ ಬಚ್ಚನ್ ಅಲ್ಲಿನ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಪ್ರವಾಸಕ್ಕೆ ಸಂಬಂಧಿಸಿದಂತೆ ಚಿತ್ರವೊಂದನ್ನು ಶೇರ್ ಮಾಡಿದ್ದು, ಮಂಕಿ ಕ್ಯಾಪ್, ಚಳಿಗಾಲದ ಜಾಕೆಟ್, ಗ್ಲೌಸ್ ಮತ್ತು ಸ್ನೋ ಕನ್ನಡಕ ಧರಿಸಿರುವ ಅವರು, ‘ಲಡಾಖ್ಗೆ ಹೋಗಿ ಬಂದೆ ಚಳಿ ತಡೆಯಲು ಇವೆಲ್ಲ ಧರಿಸಿದ್ದರೂ ಅವುಗಳೂ ನನ್ನನ್ನು ಚಳಿಯಿಂದ ಕಾಪಾಡಲಿಲ್ಲ’ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
T 3774 - ... went to Ladakh and back .. minus 33 degrees .. even this could ot save me from the cold .. !! pic.twitter.com/I2BduanyYY
— Amitabh Bachchan (@SrBachchan) January 5, 2021
ಸದ್ಯ, ಅಮಿತಾಬ್ ಬಚ್ಚನ್, ಜನಪ್ರಿಯ ಕ್ವಿಜ್ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಈ ಟ್ವೀಟ್ ಜೊತೆಗೆ ಬಚ್ಚನ್, 1990ರಲ್ಲಿ ರಷ್ಯಾದ ಮಾಸ್ಕೋದಲ್ಲಿ ಅಭಿಮಾನಿಗಳಿಗೆ ಆಟೋಗ್ರಾಫ್ಗೆ ಸಹಿ ಹಾಕುತ್ತಿರುವ ಹಳೆಯ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.