ಮಂಗಳವಾರ, ಡಿಸೆಂಬರ್ 7, 2021
23 °C

ಆರ್ಯನ್‌ ಜೊತೆ ಗಾಂಜಾ ಕುರಿತು ಚಾಟ್‌: 'ತಮಾಷೆ ಮಾಡುತ್ತಿದ್ದೆ' ಎಂದ ಅನನ್ಯಾ ಪಾಂಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಆರ್ಯನ್‌ ಖಾನ್‌ ಜೊತೆ ನಡೆಸಿದ್ದ ವಾಟ್ಸ್‌ಆ್ಯಪ್‌ ಚಾಟ್‌ಗಳ ಆಧಾರದ ಮೇಲೆ ನಟಿ ಅನನ್ಯಾ ಪಾಂಡೆ ಅವರ ವಿಚಾರಣೆಯನ್ನು ಎನ್‌ಸಿಬಿ ಮುಂದುವರೆಸಿದೆ.

ಇಂಡಿಯಾ ಟುಡೇ ವರದಿ ಪ್ರಕಾರ, ಆರ್ಯನ್‌ಗೆ 'ಗಾಂಜಾ' ವ್ಯವಸ್ಥೆ ಮಾಡುವುದಾಗಿ ಚಾಟ್‌ನಲ್ಲಿ ಒಪ್ಪಿಕೊಂಡಿದ್ದರ ಕುರಿತು ಅನನ್ಯಾರನ್ನು ಎನ್‌ಸಿಬಿ ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿರುವ 22 ವರ್ಷದ ಬಾಲಿವುಡ್‌ ನಟಿಯು 'ನಾನು ತಮಾಷೆ ಮಾಡುತ್ತಿದ್ದೆ' ಎಂದು ತಿಳಿಸಿದ್ದಾರೆ.

ಗಾಂಜಾ ಖರೀದಿಸುವ ಕುರಿತು ಆರ್ಯನ್‌ ಖಾನ್‌ ಮತ್ತು ಅನನ್ಯಾರ ನಡುವೆ ಚಾಟ್‌ ನಡೆದಿತ್ತು. ಈ ಚಾಟ್‌ನಲ್ಲಿ ಗಾಂಜಾ ಬಗ್ಗೆ ಆರ್ಯನ್‌ ಖಾನ್‌ ಅನನ್ಯಾರನ್ನು ಕೇಳಿದ್ದಾನೆ. ಆತನಿಗೆ ಗಾಂಜಾವನ್ನು ವ್ಯವಸ್ಥೆ ಮಾಡುವುದಾಗಿ ಅನನ್ಯಾ ಒಪ್ಪಿಕೊಂಡಿದ್ದಾರೆ.

ಎನ್‌ಸಿಬಿ ವಿಚಾರಣೆಯ ಸಮಯದಲ್ಲಿ ಅನನ್ಯಾ ಪಾಂಡೆಗೆ ಈ ಚಾಟ್ ಅನ್ನು ತೋರಿಸಿದಾಗ, 'ನಾನು ತಮಾಷೆ ಮಾಡುತ್ತಿದ್ದೆ' ಎಂದು ಉತ್ತರಿಸಿದ್ದಾರೆ.

'ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಆರ್ಯನ್ ಖಾನ್ ಜೊತೆ ಓದಿದ್ದೇನೆ. ಆರ್ಯನ್ ಖಾನ್ ಸಹೋದರಿ ಸುಹಾನಾ ಸಹ ನನ್ನ ಅತ್ಯಂತ ಆಪ್ತ ಸ್ನೇಹಿತೆ. ಅವರೆಲ್ಲರೂ ನನ್ನ ಕುಟುಂಬದ ಸ್ನೇಹಿತರು' ಎಂದು ಅನನ್ಯಾ ಎನ್‌ಸಿಬಿ ವಿಚಾರಣೆ ವೇಳೆ ತಿಳಿಸಿದ್ದಾರೆ.

'ನಾನು ಡ್ರಗ್ಸ್ ಸೇವಿಸಿಲ್ಲ. ಯಾರಿಗೂ ಸರಬರಾಜು ಮಾಡಿಲ್ಲ' ಎಂದು ಅನನ್ಯಾ ಎನ್‌ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಆರ್ಯನ್ ಖಾನ್ ಜೊತೆಗಿನ ಮಾತುಕತೆಯ ಬಗ್ಗೆ ಕೇಳಿದಾಗ, ಸಂಭಾಷಣೆಗಳು ಹಳೆಯದಾಗಿರುವುದರಿಂದ ಅಷ್ಟೇನೂ ನೆನಪಿಲ್ಲ ಎಂದು ಅನನ್ಯಾ ಹೇಳಿದ್ದಾರೆ.

ಎನ್‌ಸಿಬಿಯ ಪ್ರಕಾರ, ಅನನ್ಯಾ ಪಾಂಡೆಯವರು ಆರ್ಯನ್ ಖಾನ್‌ಗಾಗಿ ಯಾವುದೇ ಮಾದಕ ವಸ್ತುವನ್ನು ವ್ಯವಸ್ಥೆ ಮಾಡಿದ್ದರ ಬಗ್ಗೆ ಪುರಾವೆಗಳು ದೊರೆತಿಲ್ಲ. ಆದರೆ, ಆರ್ಯನ್ ಮತ್ತು ಅನನ್ಯಾ ನಡುವೆ ಡ್ರಗ್ಸ್ ಬಗ್ಗೆ ಹಲವು ಸಂಭಾಷಣೆಗಳು ನಡೆದಿವೆ.

ಮುಂಬೈನ ಬಲ್ಲಾರ್ಡ್‌ ಎಸ್ಟೇಟ್‌ನಲ್ಲಿರುವ ಕಚೇರಿಯಲ್ಲಿ ಅನನ್ಯಾ ಪಾಂಡೆಯನ್ನು ಶುಕ್ರವಾರವೂ ವಿಚಾರಣೆಗೆ ಒಳಪಡಿಸಲಾಗಿದೆ.

ಬಾಂದ್ರಾದಲ್ಲಿರುವ ಅನನ್ಯಾ ಪಾಂಡೆ ನಿವಾಸಕ್ಕೆ ಗುರುವಾರ ತೆರಳಿದ್ದ ಎನ್‌ಸಿಬಿ ಅಧಿಕಾರಿಗಳು ಆಕೆಯ ಮೊಬೈಲ್‌ ಫೋನ್‌ ಸೇರಿ ಕೆಲವು ಎಲೆಕ್ಟ್ರಾನಿಕ್ಸ್‌ ಸಾಧನಗಳನ್ನು ವಶಪಡಿಸಿಕೊಂಡಿದ್ದರು.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಆರ್ಯನ್ ಖಾನ್ ಅಕ್ಟೋಬರ್ 2ರಿಂದ ಜೈಲಿನಲ್ಲಿದ್ದಾರೆ.

ಆರ್ಯನ್‌ ಖಾನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 26ರಂದು ನಡೆಸುವುದಾಗಿ ಬಾಂಬೆ ಹೈಕೋರ್ಟ್ ತಿಳಿಸಿದೆ.

ಇದನ್ನೂ ಓದಿ- ಮುಂಬೈ: ಹಡಗಿನಲ್ಲಿ ಡ್ರಗ್ಸ್ ಪಾರ್ಟಿ- ಪ್ರಮುಖ ಆರೋಪಿ ಬಂಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು