ಬೆಂಗಳೂರು: ಮೈಕ್ ಟೈಸನ್ ಎಂದರೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಬಾಕ್ಸಿಂಗ್ ಲೋಕದಲ್ಲಿ ಅವರದ್ದು ವಿಶೇಷ ಸಾಧನೆ ಜನಪ್ರಿಯತೆ ಗಳಿಸಿದೆ.
ಮೈಕ್ ಟೈಸನ್ ಜತೆಗೆ ಅನನ್ಯಾ ಪಾಂಡೆ 'ಲೈಗರ್' ಚಿತ್ರೀಕರಣ ತಾಣದಿಂದ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಅನನ್ಯಾ ಪಾಂಡೆ ಅವರ ಚಿತ್ರವನ್ನು 9 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ನಟ ಅಭಿಮನ್ಯು ದಾಸನಿ 'ಲಕ್ಕಿ ಗರ್ಲ್' ಎಂದು ಕಾಮೆಂಟ್ ಮಾಡಿದ್ದಾರೆ.
ಲೈಗರ್ ಚಿತ್ರದ ನಟ ವಿಜಯ್ ದೇವರಕೊಂಡ ಕೂಡ ಮೈಕ್ ಟಸನ್ ಜತೆಗಿನ ಫೋಟೊ ಒಂದನ್ನು ಹಂಚಿಕೊಂಡಿದ್ದು, ಮೈಕ್ ಟೈಸನ್ ಜತೆಗಿನ ಪ್ರತಿಕ್ಷಣವೂ ನೆನಪಿನಲ್ಲಿ ಉಳಿಯುವಂಥದ್ದು ಎಂದಿದ್ದಾರೆ.
ಲೈಗರ್ ಚಿತ್ರವನ್ನು ಚಾರ್ಮಿ ಕೌರ್ ಜತೆಗೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದು, ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.