ಗುರುವಾರ , ಅಕ್ಟೋಬರ್ 17, 2019
24 °C

ಕಮಲ್ ಹಾಸನ್ ಇಂಡಿಯನ್-2 ಗೆ ಅನಿಲ್ ಕಪೂರ್ ಸೇರ್ಪಡೆ

Published:
Updated:

ಕಮಲ್‌ ಹಾಸನ್‌ ಅಭಿನಯದ ಸಿನಿಮಾ ‘ಇಂಡಿಯನ್‌ 2’ರಲ್ಲಿ ಬಾಲಿವುಡ್‌ ನಟ ಅನಿಲ್‌ ಕಪೂರ್ ಕೂಡ ನಟಿಸಲಿದ್ದಾರೆ. ‘ಇಂಡಿಯನ್‌’ ಸಿನಿಮಾ 1996ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ಸ್ವಾತಂತ್ರ್ಯ ಹೋರಾಟಗಾರನ ಪಾತ್ರ ಮಾಡಿದ್ದರು.

ಪಾರ್ಟ್‌ 2 ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಅನಿಲ್‌ ಕಪೂರ್ ಕೂಡ ಸದ್ಯದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ತಮಿಳು ಚಿತ್ರದಲ್ಲಿ ಅನಿಲ್ ನಟಿಸುತ್ತಿರುವುದು ಇದೇ ಮೊದಲು. ‘ನಾಯಕ್‌’ ಸಿನಿಮಾ ನಿರ್ದೇಶನದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಶಂಕರ್ ಅವರಿಗೆ ಅನಿಲ್‌ ಜೊತೆ ಕೆಲಸ ಮಾಡಿದ ಅನುಭವವೂ ಇದೆ. ‘ಇಂಡಿಯನ್‌ 2’ರಲ್ಲಿ ಕಾಜಲ್‌ ಅಗರವಾಲ್‌, ಕಮಲ್‌ ಹಾಸನ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಾರ್ಥ್‌, ರಕುಲ್‌ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಬಾಬಿ ಸಿಂಹ, ವಿವೇಕ್‌, ಅನಂತ್‌ ಮಹಾದೇವನ್‌ ಕೂಡ ಚಿತ್ರದಲ್ಲಿದ್ದಾರೆ. ಅನಿರುದ್ಧ್‌ ರವಿಚಂದರ್‌ ಅವರ ಸಂಗೀತ ನಿರ್ದೇಶನ ಈ ಸಿನಿಮಾಕ್ಕಿದೆ.

ಇದನ್ನೂ ಓದಿ: ಗೆದ್ದರೆ ಭ್ರಷ್ಟಾಚಾರ ರಹಿತ ಆಡಳಿತ: ಕಮಲ ಹಾಸನ್‌ ಭರವಸೆ

Post Comments (+)