ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Animal Movie | ‘ಹು ಮೇ’ ಹಾಡು: ರಣಬೀರ್​–ರಶ್ಮಿಕಾ ಮೋಡಿಗೆ ಅಭಿಮಾನಿಗಳು ಫಿದಾ

Published 11 ಅಕ್ಟೋಬರ್ 2023, 12:48 IST
Last Updated 11 ಅಕ್ಟೋಬರ್ 2023, 12:48 IST
ಅಕ್ಷರ ಗಾತ್ರ

ಬೆಂಗಳೂರು: ‘ಅನಿಮಲ್‌’ ಸಿನಿಮಾದ ‘ಹು ಮೇ’ ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸದ್ದು ಮಾಡುತ್ತಿದೆ. 

ಹಾಡಿನಲ್ಲಿ ರಣಬೀರ್‌–ರಶ್ಮಿಕಾ ಲಿಪ್‌ ಲಾಕ್‌ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಪದೇ ಪದೇ ಲಿಪ್‌ ಲಾಕ್‌ ಮಾಡುವುದು ಹಾಡಿನಲ್ಲಿ ಸೆರೆಯಾಗಿದೆ.

ಹಾಡು ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂ ಪಡೆದಿದೆ. 

ಹಿಂದಿ, ತಮಿಳು, ಕನ್ನಡ, ಮಲಯಾಳಂ, ತಮಿಳಿನಲ್ಲಿಯೂ ‘ಹು ಮೇ’ ಹಾಡು ಬಿಡುಗಡೆಯಾಗಿದೆ. ರಣಬೀರ್‌ ಮತ್ತು ರಶ್ಮಿಕಾ ಮೊದಲ ಸಲ ಬಾಲಿವುಡ್‌ನಲ್ಲಿ ತೆರೆ ಹಂಚಿಕೊಂಡಿದ್ದಾರೆ.

‘ಕಬೀರ್ ಸಿಂಗ್‌’ ನಂತರ ಸಂದೀಪ್‌ ರೆಡ್ಡಿ ನಿರ್ದೇಶನ ಎರಡನೇ ಬಾಲಿವುಡ್‌ ಚಿತ್ರ ಇದಾಗಿದೆ. ಸನ್ನಿ ದೇವೊಲ್‌, ಅನಿಲ್‌ ಕಪೂರ್‌ ಸೇರಿದಂತೆ ಅತ್ಯುನ್ನತ ತಾರಾ ಬಳಗವನ್ನು ಚಿತ್ರ ಹೊಂದಿದೆ. ಡಿಸೆಂಬರ್‌ 1ಕ್ಕೆ ಹಿಂದಿ, ತಮಿಳು, ಕನ್ನಡ, ಮಲಯಾಳಂ, ತಮಿಳಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ. 

ಗೀತಾ ಗೋವಿಂದಂ, ಡಿಯರ್‌ ಕಾಮ್ರೇಡ್‌ ಚಿತ್ರಗಳಲ್ಲಿ ವಿಜಯ್‌ ದೇವರಕೊಂಡ ಅವರೊಂದಿಗೆ ಲಿಪ್‌ ಲಾಕ್‌ ಮಾಡುವ ಮೂಲಕ ಭಾರೀ ಸದ್ದು ಮಾಡಿದ್ದ ರಶ್ಮಿಕಾ ಇದೀಗ ಮತ್ತೆ ಲಿಪ್‌ ಲಾಕ್‌ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT