ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅಭಿನಯದ ‘ನಿಶಬ್ದಂ’ ಚಿತ್ರ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ.

ಕಳಪೆ ಚಿತ್ರಕತೆಯ ಕಾರಣದಿಂದ ಈ ಸಿನಿಮಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಪ್ರತಿಭಾನ್ವಿತರಾದ ಅನುಷ್ಕಾ ಹಾಗೂ ಮಾಧವನ್ ಪಾತ್ರಗಳೂ ಕೂಡ ಸದ್ದು ಮಾಡಲಿಲ್ಲ. ಒಟ್ಟಾರೆ ಕ್ರೈಮ್ ಥಿಲ್ಲರ್ ಕತೆ ಹೊಂದಿದ್ದ ನಿಶಬ್ದಂ ಸಿನಿಮಾ ಸಿನಿ ಪ್ರೇಕ್ಷಕರ ಮನ ರಂಜಿಸಿಲ್ಲ ಎಂದೇ ಹೇಳಬಹುದು.

‘ನಿಶಬ್ದಂ’ ಸಿನಿಮಾದ ಸೋಲು ಅನುಷ್ಕಾ ಅವರನ್ನು ನಿವೃತ್ತಿ ಜೀವನಕ್ಕೆ ಒಂದು ಹೆಜ್ಜೆ ಹತ್ತಿರ ಬರುವಂತೆ ಮಾಡಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು. ಬಾಹುಬಲಿ ನಂತರ ಅನುಷ್ಕಾ ಉತ್ತಮ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸುವುದು ಸಾಧ್ಯವಾಗಿರಲಿಲ್ಲ.

ಬೇರೆ ಮಹಿಳಾ ಪ್ರಧಾನ ಚಿತ್ರಗಳಿಗೆ ಹೋಲಿಸಿದರೆ ಅನುಷ್ಕಾ ನಟನೆಯ ಸಿನಿಮಾಗಳಿಗೆ ದುಪ್ಪಟ್ಟು ಹೂಡಿಕೆ ಮಾಡಬೇಕಾಗುತ್ತದೆ. ಆ ಕಾರಣಕ್ಕೆ ಅನುಷ್ಕಾ ನಟನೆಯ ಸಿನಿಮಾಗಳು ಬೇರೆ ಮಹಿಳಾ ಪ್ರಧಾನ ಸಿನಿಮಾಗಳಿಗಿಂತ ಎರಡು ಪಟ್ಟು ಗಳಿಕೆ ಮಾಡಬೇಕು ಎಂಬುದು ನಿರ್ಮಾಪಕರ ನಿರೀಕ್ಷೆ.

ಇನ್ನು ಕೆಲವೇ ದಿನಗಳಲ್ಲಿ ಅನುಷ್ಕಾ 39ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ನಿಶಬ್ದಂನಲ್ಲಿ ಅನುಷ್ಕಾ ಮುಖ ಹಾಗೂ ಫಿಗರ್ ತಿದ್ದುವ ಸಲುವಾಗಿ 2ಕೋಟಿಯಷ್ಟು ಹಣವನ್ನು ಫೋಟೊಶಾಪ್ಗೆ ಖರ್ಚು ಮಾಡಲಾಗಿದೆ ಎನ್ನುತ್ತಿವೆ ವರದಿಗಳು.

ಆದರೆ ಸಿನಿಮಾ ಹಿಟ್ ಆಗಿದ್ದರೆ ಇದ್ಯಾವುದೂ ವಿಷಯ ಎನ್ನಿಸುತ್ತಿರಲಿಲ್ಲ. ಆದರೆ ನಿಶಬ್ದಂ ಸೋಲು ಅನುಷ್ಕಾಗೆ ಬೇಡಿಕೆ ಕಡಿಮೆ ಮಾಡಬಹುದು ಎನ್ನುತ್ತಿವೆ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.