ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಶ್ಯಬ್ದಂ’ ಬಿಡುಗಡೆ: ಮುಂದುವರಿದ ಗೊಂದಲ

Last Updated 26 ಮೇ 2020, 10:29 IST
ಅಕ್ಷರ ಗಾತ್ರ

ಈಗಾಗಲೇ, ದಕ್ಷಿಣ ಭಾರತ ಚಿತ್ರರಂಗದ ಐದು ಸಿನಿಮಾಗಳು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುವುದು ಅಧಿಕೃತಗೊಂಡಿದೆ. ಅನುಷ್ಕಾ ಶೆಟ್ಟಿ ನಟನೆಯ ‘ನಿಶ್ಯಬ್ದಂ’ ಸಿನಿಮಾವೂ ಒಟಿಟಿಯಲ್ಲಿಯೇ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೊರೊನಾ ಭೀತಿ ಕಾಣಿಸಿಕೊಳ್ಳದಿದ್ದರೆ ಕಳೆದ ತಿಂಗಳೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಇದು ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗಿದೆ. ತಮಿಳಿನಲ್ಲಿ ‘ಸೈಲೆಂಟ್‌’ ಎಂಬ ಟೈಟಲ್‌ ಇಡಲಾಗಿದೆ.

ಹೇಮಂತ್‌ ಮಧುಕರ್ ನಿರ್ದೇಶನದ ಈ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆದರೆ, ಲಾಕ್‌ಡೌನ್‌ ಹೀಗೆಯೇ ಮುಂದುವರಿದರೆ ಥಿಯೇಟರ್‌ ಮೂಲಕ ಜನರ ಮುಂದೆ ಬರುವುದು ಕಷ್ಟ ಎನ್ನುವುದು ನಿರ್ಮಾಪಕರ ಅಂಬೋಣ. ಒಟಿಟಿ ಮೂಲಕ ಬಿಡುಗಡೆ ಮಾಡಬೇಕೇ ಅಥವಾ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕೇ ಎಂಬ ಗೊಂದಲವಂತೂ ಮುಂದುವರಿದಿದೆ.

ಈ ಬಗ್ಗೆ ಚಿತ್ರದ ನಿರ್ಮಾಪಕರದಲ್ಲಿ ಒಬ್ಬರಾದ ಕೋನ ವೆಂಕಟ್‌, ‘ನಿಶ್ಯಬ್ದಂ ಚಿತ್ರದ ಬಿಡುಗಡೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಊಹಾಪೋಹಗಳನ್ನು ಗಮನಿಸಿದ್ದೇನೆ. ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡುವುದೇ ನಮ್ಮ ಪ್ರಧಾನ ಆದ್ಯತೆ. ಆದರೆ, ಕೊರೊನಾ ಭೀತಿ ಹೀಗೆಯೇ ಮುಂದುವರಿದರೆ ಒಟಿಟಿ ಮೂಲಕ ಬಿಡುಗಡೆ ಮಾಡುವ ಬಗ್ಗೆಯೂ ಪರ್ಯಾಯವಾಗಿ ಆಲೋಚನೆ ನಡೆಸುವುದು ಅನಿವಾರ್ಯ’ ಎಂದು ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

‘ನಿಶ್ಯಬ್ದಂ’ ಸೈಲೆಂಟ್‌ ಥ್ರಿಲ್ಲರ್‌ ಚಿತ್ರ. ಮಾಧವನ್‌, ಅಂಜಲಿ, ಶಾಲಿನಿ ಪಾಂಡೆ ಮತ್ತು ಹಾಲಿವುಡ್‌ ನಟ ಮೈಕಲ್‌ ಮ್ಯಾಡ್ಸೆನ್‌ ಮುಖ್ಯಭೂಮಿಕೆಯಲ್ಲಿದ್ದಾರೆ.

ಲಾಕ್‌ಡೌನ್‌ ಪರಿಣಾಮ ದೇಶದಲ್ಲಿ ಚಿತ್ರಮಂದಿರಗಳನ್ನು ತೆರೆಯುವ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಮತ್ತೊಂದೆಡೆ ಚಿತ್ರೋದ್ಯಮದ ಚಟುವಟಿಕೆಗಳು ಸುಸೂತ್ರವಾಗಿ ಯಾವಾಗ ಶುರುವಾಗುತ್ತವೆ ಎಂದು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಈ ನಡುವೆಯೇ ತೆಲುಗು ಚಿತ್ರರಂಗದ ನಿರ್ದೇಶಕರು ಮತ್ತು ನಿರ್ಮಾಪಕರು ಸಿನಿಮಾ ಶೂಟಿಂಗ್‌ಗೆ ಅವಕಾಶ ನೀಡಬೇಕು ಎಂದು ತೆಲಂಗಾಣ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT