ಮಂಗಳವಾರ, ಏಪ್ರಿಲ್ 7, 2020
19 °C

ಎಂ.ಜಿ.ಆರ್‌ ಗೆಟಪ್‌ನಲ್ಲಿ ಅರವಿಂದ ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ನೈಜ ಜೀವನ ಕತೆ ಆಧರಿಸಿದ  ‘ತಲೈವಿ’ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಬಾಲಿವುಡ್‌ ನಟಿ ಕಂಗನಾ ರನೋಟ್‌ ಈ ಬಯೋಪಿಕ್‌ನಲ್ಲಿ ಜಯಾ ಪಾತ್ರದಲ್ಲಿ ಮಿಂಚಲಿದ್ದಾರೆ.

ತಮಿಳರ ನೆಚ್ಚಿನ ನಟ ಎಂ.ಜಿ. ರಾಮಚಂದ್ರನ್‌ ಪಾತ್ರದಲ್ಲಿ ನಟ ಅರವಿಂದ ಸ್ವಾಮಿ ನಟಿಸಿದ ದೃಶ್ಯಗಳಿರುವ ಟೀಸರ್‌ ಕ್ಲಿಪ್‌ಗಳನ್ನು ತಲೈವಿ ಚಿತ್ರತಂಡ ಬಿಡುಗಡೆ ಮಾಡಿದೆ. ಎಂ.ಜಿ.ಆರ್‌ ಜನ್ಮದಿನದಂದು ಮೊದಲ ಲುಕ್‌ ಬಿಡುಗಡೆಯಾದ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಫೋಟೊ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊ ಭಾರಿ ಸದ್ದು ಮಾಡುತ್ತಿದೆ. 

ಗುಂಗುರು ಕೂದಲು, ಕಪ್ಪು ಕನ್ನಡಕದಲ್ಲಿ ಎಂ.ಜಿ.ಆರ್‌ ಗೆಟಪ್‌ನಲ್ಲಿರುವ ಅರವಿಂದ ಸ್ವಾಮಿ ಥೇಟ್‌ ಹದಿಹರೆಯದ ಎಂ.ಜಿ.ಆರ್‌ ನಕಲಿನಂತೆ ಕಾಣುತ್ತಿದ್ದಾರೆ. ಪಾತ್ರಕ್ಕಾಗಿ ಅವರು ಮೀಸೆ ಕೂಡ ತೆಗೆದಿದ್ದಾರೆ.  

ಎಂ.ಜಿ.ಆರ್‌ ನಾಯಕ ನಟರಾಗಿ ನಟಿಸಿದ್ದ ಕಪ್ಪುಬಿಳುಪು ಚಿತ್ರದ ಪ್ರಸಿದ್ಧ ಹಾಡು ‘ನಾನ್‌ ಉಂಗಳ್‌ ವೀಟು ಪಿಳೈ’ ಹಾಡಿಗೆ ಅರವಿಂದ ಸ್ವಾಮಿ ಹೆಜ್ಜೆ ಹಾಕಿದ್ದಾರೆ. 

ಇಡೀ ಹಾಡನ್ನು ಮೂಲ ಹಾಡಿನಂತೆಯೇ ರೀ ಕ್ರಿಯೇಟ್‌ ಮಾಡಲಾಗಿದೆ. ಥೇಟ್‌ ಎಂ.ಜಿ.ಆರ್‌ ಅವರಂತೆಯೇ ಸೂಟ್‌, ಬೂಟು ಧರಿಸಿದ ಅರವಿಂದ ಸ್ವಾಮಿ ಅವರು ಎಂ.ಜಿ.ಆರ್‌ ಅವರ ಮ್ಯಾನಸಿರಂ ಅನ್ನೂ ಯಥಾವತ್ತಾಗಿ ಅನುಕರಿಸಿದ್ದಾರೆ. ಹಾಡಿನಲ್ಲಿರುವ ಸಹ ಕಲಾವಿದರು ಕೂಡ ಮೂಲ ಚಿತ್ರದ ಕಲಾವಿದರನ್ನೇ ಹೋಲುತ್ತಾರೆ.

ಈ ಟೀಸರ್‌ ಬಗ್ಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೂನ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು