ಶನಿವಾರ, ಡಿಸೆಂಬರ್ 4, 2021
24 °C

ಮಲೈಕಾ ಜನ್ಮದಿನ: ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ರಿಂದ ರೊಮ್ಯಾಂಟಿಕ್‌ ಪೋಸ್ಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಬೆಡಗಿ ಮಲೈಕಾ ಅರೋರಾ 48ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಸ್ನೇಹಿತರು, ಅಭಿಮಾನಿಗಳೂ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳು ಮಲೈಕಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅದರಲ್ಲೂ ಮಲೈಕಾರ ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕೋರಿರುವ ಶುಭಾಶಯ ಮಾತ್ರ ವಿಶೇಷವಾಗಿದೆ.

ಮಲೈಕಾ ಅವರು ತಮಗೆ ಕಿಸ್‌ ಕೊಡುತ್ತಿರುವ ರೊಮ್ಯಾಂಟಿಕ್‌ ಚಿತ್ರವೊಂದನ್ನು ಅರ್ಜುನ್‌ ಕಪೂರ್‌ ಹಂಚಿಕೊಂಡಿದ್ದಾರೆ.

'ಈ ದಿನ ಅಥವಾ ಇನ್ನಾವುದೇ ದಿನದಲ್ಲಿ ನಿನ್ನ ನಗುವನ್ನಷ್ಟೇ ನಾನು ಬಯಸುತ್ತೇನೆ. ಈ ವರ್ಷವೂ ನೀನು ಹೆಚ್ಚು ನಗುತ್ತಿರಬೇಕು' ಎಂದು ಅರ್ಜುನ್‌ ಬರೆದುಕೊಂಡಿದ್ದಾರೆ.

ಬಾಲಿವುಡ್‌ ಸೆಲೆಬ್ರಿಟಿಗಳಾದ ಬಿಪಾಶಾ ಬಸು, ದಿಯಾ ಮಿರ್ಜಾ, ತಾಹಿರಾ ಕಶ್ಯಪ್ ಸೇರಿದಂತೆ ಹಲವರು ಅರ್ಜುನ್‌ ಅವರ ಪೋಸ್ಟ್‌ಗೆ ಹೃದಯದ ಎಮೋಜಿಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

48 ವರ್ಷದ ಮಲೈಕಾ ಅರೋರಾ, ‘ವಿ’ ಚಾನೆಲ್ ಮೂಲಕ ತಮ್ಮ ವೃತ್ತಿಬದುಕನ್ನು ಆರಂಭಿಸಿದವರು. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಾಲೂರಿದ ಮೇಲೆ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದರು. 2017ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಬಳಿಕ ಅರ್ಜುನ್ ಕಪೂರ್ ಜತೆಗೆ ಒಡನಾಟ ಹೊಂದಿರುವ ಮಲೈಕಾ, ಅರ್ಜುನ್‌ ಜೊತೆ ಸಹಜೀವನ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು