ಬೆಂಗಳೂರು: ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ (84) ಶನಿವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನು ಇತ್ತೀಚೆಗೆ ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಲಕ್ಷ್ಮೀದೇವಿ ಅವರು ಖ್ಯಾತ ನಟ ಶಕ್ತಿ ಪ್ರಸಾದ್ ಅವರ ಪತ್ನಿ. ಲಕ್ಷ್ಮಿದೇವಿ ಮತ್ತು ಶಕ್ತಿ ಪ್ರಸಾದ್ ದಂಪತಿಗೆ ಮೂವರು ಮಕ್ಕಳು. ಒಬ್ಬರು ಪುತ್ರಿ, ಇಬ್ಬರು ಪುತ್ರರು ಇದ್ದರು. ಪುತ್ರರ ಪೈಕಿ ಕಿಶೋರ್ ಸರ್ಜಾ 2009ರಲ್ಲಿ ನಿಧನರಾಗಿದ್ದರು.
ಅಂತ್ಯಕ್ರಿಯೆಯನ್ನು ಮಧುಗಿರಿ ಬಳಿಯಿರುವ ತಮ್ಮ ಹಳ್ಳಿಯಲ್ಲಿ ನಡೆಸುವುದಾಗಿ ಅರ್ಜುನ್ ಸರ್ಜಾ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.