ಗುವಾಹಟಿ: ಕಾರ್ಯಭಾರ ಒತ್ತಡ ನಿರ್ವಹಣೆಯ ಭಾಗವಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಟೀಮ್ ಇಂಡಿಯಾದ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬೂಮ್ರಾ ಹೊರಗುಳಿಯುವ ಸಾಧ್ಯತೆಯಿದೆ.

ಈಗಷ್ಟೇ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪಾಂಡ್ಯ ಹಾಗೂ ಬೂಮ್ರಾ ಅವರಿಗೆ ವಿಶ್ರಾಂತಿ ಕಲ್ಪಿಸುವ ಸಾಧ್ಯತೆಯಿದೆ.

ತವರಿನಲ್ಲಿ ಮುಂದಿನ ವರ್ಷ ಐಸಿಸಿ ಟ್ವೆಂಟಿ-20 ವಿಶ್ವಕಪ್ ನಡೆಯಲಿರುವ ಹಿನ್ನೆಲೆಯಲ್ಲಿ ಪಾಂಡ್ಯ ಹಾಗೂ ಬೂಮ್ರಾ ಚುಟುಕು ಕ್ರಿಕೆಟ್ನತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲಿದ್ದಾರೆ.

ಕಳೆದ ಸೆಪ್ಟೆಂಬರ್ನಲ್ಲಿ ದುಬೈಯಲ್ಲಿ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ವೇಳೆ ಪಾಂಡ್ಯ ಗಾಯಗೊಂಡಿದ್ದರು. ಬಳಿಕ ಪಾಕಿಸ್ತಾನ ವಿರುದ್ಧ ನಡೆದ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಗಾಯದ ಹಿನ್ನೆಲೆಯಲ್ಲಿ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲೂ ಹಾರ್ದಿಕ್ ಲಭ್ಯರಿರಲಿಲ್ಲ.

'ಹಾರ್ದಿಕ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಆಟಕ್ಕೆ ಮರಳುವ (ಆರ್ಟಿಪಿ) ದಿನಚರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯಭಾರ ನಿರ್ವಹಣೆಯ ಹಿನ್ನೆಲೆಯಲ್ಲಿ ಶೀಘ್ರದಲ್ಲೇ 50 ಓವರ್ಗಳ ಕ್ರಿಕೆಟ್ಗೆ ಮರಳುವುದು ಅಪಾಯಕಾರಿಯಾಗಿದೆ. ಟಿ20 ವಿಶ್ವಕಪ್ವರೆಗೆ ಹಾರ್ದಿಕ್ ಚುಟುಕು ಕ್ರಿಕೆಟ್ನತ್ತ ಗಮನ ಹರಿಸಲಿದ್ದು, ಬಿಸಿಸಿಐ ವೈದ್ಯಕೀಯ ತಂಡವು ನಿಗಾ ವಹಿಸಲಿದೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ಸೈಯದ್ ಮುಶ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಪರ ಆಡಲಿರುವ ಹಾರ್ದಿಕ್ ತಮ್ಮ ಫಿಟ್ನೆಸ್ ಸಾಬೀತು ಮಾಡಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ನವೆಂಬರ್ 30ರಿಂದ ಆರಂಭವಾಗಲಿದೆ. ಬಳಿಕ ಐದು ಪಂದ್ಯಗಳ ಟಿ20 ಸರಣಿಯು ಡಿ.9ರಿಂದ ಆರಂಭವಾಗಲಿದೆ.
.ICC Rankings: ಏಕದಿನದಲ್ಲಿ ರೋಹಿತ್ ಶರ್ಮಾಗೆ ಅಗ್ರಸ್ಥಾನ ನಷ್ಟ.IND vs SA | ತಂಡದ ಜೊತೆ ಗುವಾಹಟಿಗೆ ಗಿಲ್ ಪ್ರಯಾಣ: 2ನೇ ಪಂದ್ಯದಲ್ಲಿ ಆಡುವರೇ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.