ಬೆಂಗಳೂರು: ಬೌಲರ್ಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದ ಪಿಚ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಎಚ್ಚರಿಕೆಯ ಆಟ ಆಡಿದ್ದರಿಂದ ಕರ್ನಾಟಕ ತಂಡವು 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 3 ವಿಕೆಟ್ಗಳಿಂದ ಉತ್ತರಾಖಂಡ ತಂಡವನ್ನು ಮಣಿಸಿತು.

ಇಲ್ಲಿನ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 159ರನ್ಗಳ ಗುರಿ ಪಡೆದಿದ್ದ ರಾಜ್ಯ ತಂಡ 45.2 ಓವರ್ಗಳಲ್ಲಿ 7 ವಿಕೆಟ್ಗೆ 162 ರನ್ಗಳನ್ನು ಕಲೆಹಾಕಿ ಸಂಭ್ರಮಿಸಿತು.

7 ಓವರ್ಗಳಲ್ಲಿ 1 ವಿಕೆಟ್ಗೆ 44ರನ್ಗಳಿಂದ ಅಂತಿಮ ದಿನವಾದ ಬುಧವಾರ ಆಟ ಮುಂದುವರಿಸಿದ ಆತಿಥೇಯ ತಂಡ, ಮೊದಲ ಅವಧಿಯ ಎರಡನೇ ಓವರ್ನ ಕೊನೆಯ ಎಸೆತದಲ್ಲಿ ಧ್ರುವ್ ಕೃಷ್ಣನ್ (24; 35ಎ, 3ಬೌಂ) ವಿಕೆಟ್ ಕಳೆದುಕೊಂಡಿತು. 17ನೇ ಓವರ್ನ ಎರಡನೇ ಎಸೆತದಲ್ಲಿ ನಾಯಕ ಮಣಿಕಂಠ ಶಿವಾನಂದ್ (14; 25ಎ, 3ಬೌಂ) ಹಾಗೂ ಮರು ಓವರ್ನ ಮೊದಲ ಎಸೆತದಲ್ಲಿ ನಿತೀಶ್ ಆರ್ಯ (33; 37ಎ, 4ಬೌಂ) ಪೆವಿಲಿಯನ್ ಸೇರಿದಾಗ ಕರ್ನಾಟಕದ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು.

ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ರೋಹಿತ್ ಎ.ಎ. (6) ಮತ್ತು ವೈಭವ್ ಶರ್ಮಾ (28; 37ಎ, 3ಬೌಂ, 1ಸಿ) 5ನೇ ವಿಕೆಟ್ ಜೊತೆಯಾಟದಲ್ಲಿ 35 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಎರಡು ರನ್ಗಳ ಅಂತರದಲ್ಲಿ ಇವರಿಬ್ಬರೂ ಔಟಾದರು. ಆಗ ತಂಡದ ಮೊತ್ತ 6 ವಿಕೆಟ್ಗೆ 113. ಈ ಹಂತದಲ್ಲಿ ಒಂದುಗೂಡಿದ ವಿಕೆಟ್ ಕೀಪರ್ ರೆಹಾನ್ ಮೊಹಮ್ಮದ್ (ಔಟಾಗದೆ 22; 37ಎ, 1ಬೌಂ) ಮತ್ತು ಸಿದ್ದಾರ್ಥ್ ಅಖಿಲ್ (20; 23ಎ, 3ಬೌಂ) ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು.

41ನೇ ಓವರ್ನಲ್ಲಿ ಸಿದ್ದಾರ್ಥ್ ಔಟಾದಾಗ ತಂಡದ ಗೆಲುವಿಗೆ 15ರನ್ಗಳು ಬೇಕಿದ್ದವು. ರೆಹಾನ್ ಮತ್ತು ಅಕ್ಷತ್ ಪ್ರಭಾಕರ್ (ಔಟಾಗದೆ 8; 12ಎ, 1ಬೌಂ) ತಂಡವನ್ನು ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್:

ಉತ್ತರಾಖಂಡ; ಮೊದಲ ಇನಿಂಗ್ಸ್: 81.2 ಓವರ್ಗಳಲ್ಲಿ 202 ಮತ್ತು 77.1 ಓವರ್ಗಳಲ್ಲಿ 191.

ಕರ್ನಾಟಕ: ಪ್ರಥಮ ಇನಿಂಗ್ಸ್; 90 ಓವರ್ಗಳಲ್ಲಿ 235 ಮತ್ತು 45.2 ಓವರ್ಗಳಲ್ಲಿ 7 ವಿಕೆಟ್ಗೆ 162 (ಧ್ರುವ್ ಕೃಷ್ಣನ್ 24, ನಿತೀಶ್ ಆರ್ಯ 33, ವೈಭವ್ ಶರ್ಮಾ 28, ರೆಹಾನ್ ಮೊಹಮ್ಮದ್ ಔಟಾಗದೆ 22; ಪ್ರಿಯಾಂಶು ಸಿಂಗ್ 52ಕ್ಕೆ3, ಆಕಾಶ್ ಕುಮಾರ್ 32ಕ್ಕೆ2, ನಿಶು ಪಟೇಲ್ 25ಕ್ಕೆ1).

ಫಲಿತಾಂಶ: ಕರ್ನಾಟಕಕ್ಕೆ 3 ವಿಕೆಟ್ಗಳ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.