ಬೆಂಗಳೂರು: ನಗರದ ಒರಾಯನ್ ಮಾಲ್‌ನಲ್ಲಿ ನಡೆಯುತ್ತಿರುವ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರೀಲ್ ಬದಲು ರಿಯಲ್ ಫೈಟ್ ನಡೆದಿದೆ. ನಿರ್ಮಾಪಕ ಕುಮಾರ್ ಶ್ರೀನಿವಾಸ್ ಅವರ ಮೇಲೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯೇನು?
ತಮ್ಮ ಮೇಲಾದ ಹಲ್ಲೆ ಕುರಿತು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕುಮಾರ್, ‘ಮಾರ್ಚ್ 25ರ ಸಂಜೆ 6.50 ರಿಂದ 7.10 ಗಂಟೆ ವೇಳೆ ಈ ಘಟನೆ ನಡೆದಿದೆ. ಒರಾಯಾನ್ ಮಾಲ್‌ನಲ್ಲಿರುವ ಚಿತ್ರೋತ್ಸವದ ಕಚೇರಿ ಎದುರು ಏನೋ ಕೇಳಲೆಂದು ಹೋಗಿದ್ದೆ. ಆಗ ಕಶ್ಯಪ್ ಅವರು ಅವಾಚ್ಯ ಪದಗಳಿಂದ ನಿಂದಿಸಿ ಬೆನ್ನು, ಭುಜದ ಮೇಲೆ ಹೊಡೆದರು. ನಿಮ್ಮನ್ನು ಒಳಗೆ ಬಿಟ್ಟಿದ್ದು ಯಾರು ಎಂದು ಪ್ರಶ್ನಿಸಿದರು. ನಾನು ಸ್ಥಳದಿಂದ ದೂರವಾಗಿ ಪಾರಾದೆ’ ಎಂದು ಕುಮಾರ್ ಹೇಳಿಕೊಂಡಿದ್ದಾರೆ.
‘ಘಟನೆ ನಡೆದ ತಕ್ಷಣ ಅಲ್ಲಿಗೆ ಬಂದ ಚಿತ್ರರಂಗದ ಹಿರಿಯರು, ಚಿತ್ರೋತ್ಸವ ನಡೆಯುತ್ತಿದೆ. ಅದಕ್ಕೆ ಕಳಂಕ ಬರಬಾರದು ಸಂಧಾನದ ಯತ್ನ ಮಾಡಿದ್ದಾರೆ. ಈ ವಿಚಾರವಾಗಿ ಇಂದು ಕಾನೂನು ಹೋರಾಟ ಮಾಡುತ್ತೇನೆ. ಇಂದು (ಸೋಮವಾರ) ದೂರು ನೀಡುತ್ತೇನೆ’ ಎಂದು ಕುಮಾರ್ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆಗೆ ಅಶೋಕ್ ಕಶ್ಯಪ್ ಅವರು ಮೊಬೈಲ್ ಕರೆ ಸ್ವೀಕರಿಸಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.