ಗುರುವಾರ , ಜನವರಿ 27, 2022
27 °C

ಸಾಲುಮರದ ತಿಮ್ಮಕ್ಕ, ತುಳಸಿ ಗೌಡರನ್ನು ಭೇಟಿಯಾಗಿದ್ದು ನನ್ನ ಪುಣ್ಯ –ನಟಿ ಆಶಾ ಭಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದನವನದ ’ರಾಬರ್ಟ್‌’ ಬೆಡಗಿ ಆಶಾ ಭಟ್‌ ಅವರು ಪರಿಸರ ದಂತಕತೆ ಖ್ಯಾತಿಯ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಅವರನ್ನು ಭೇಟಿಯಾಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ನಟ ದರ್ಶನ್‌ ಅಭಿನಯದ ’ರಾಬರ್ಟ್‌’ ಸಿನಿಮಾದ ಮೂಲಕ ಆಶಾ ಭಟ್‌ ಚಂದನವನಕ್ಕೆ ಕಾಲಿಟ್ಟರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.  

ಆಶಾ ಭಟ್‌ ಇತ್ತೀಚೆಗೆ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಅವರನ್ನು ಭೇಟಿ ಮಾಡಿದ್ದರು. ಅವರ ಜೊತೆ ಪರಿಸರದ ಬಗ್ಗೆ ಮಾತುಕತೆ ನಡೆಸಿ ಅವರೊಟ್ಟಿಗೆ ಕೆಲ ಹೊತ್ತು ಕಾಲ ಕಳೆದಿದ್ದರು.

ಇವರ ಮಾದರಿ ಜೀವನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಆಶಾ ಭಟ್‌ ಅವರ ನಡುವೆ ನಾನಿರುವುದು ಪುಣ್ಯ ಎಂದು ಹೇಳಿದ್ದಾರೆ.

ಭದ್ರಾವತಿ ಮೂಲದವರಾದ ಆಶಾ ಭಟ್ ರೂಪದರ್ಶಿ ಕೂಡ ಆಗಿದ್ದಾರೆ. ಜಂಗ್ಲಿ ಚಿತ್ರದ ಮೂಲಕ ಅವರು  ಬಾಲಿವುಡ್‌ ಪ್ರವೇಶಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು