ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ಪುನೀತ್‌ರಂತೆ ವರ್ಕ್‌ಔಟ್ ಮಾಡಿ ಗಮನ ಸೆಳೆದ ಅಶ್ವಿನಿ ಪುನೀತ್‌ ರಾಜಕುಮಾರ್

Last Updated 18 ಫೆಬ್ರವರಿ 2023, 6:03 IST
ಅಕ್ಷರ ಗಾತ್ರ

ಬೆಂಗಳೂರು: ಪವರ್‌ಸ್ಟಾರ್ ಪುನೀತ್‌ ರಾಜಕುಮಾರ್ ಅವರು ಬದುಕಿದ್ದಾಗ ನಿಯಮಿತವಾಗಿ ವರ್ಕ್‌ಔಟ್ ಮಾಡುತ್ತಿದ್ದರು. ಆ ಮೂಲಕ ತಮ್ಮ ದೇಹವನ್ನು ಹುರಿಗೊಳಿಸಿಕೊಂಡಿದ್ದ ಪುನೀತ್ ತಮ್ಮದೇಯಾದ ವರ್ಕ್‌ಔಟ್ ಸ್ಟೈಲ್‌ಗಳ ಮೂಲಕ ಅಭಿಮಾನಿಗಳಿಗೆ ಇಷ್ಟವಾಗಿದ್ದರು.

ಅಪ್ಪು ನಿಧನದ ನಂತರ ಅಪ್ಪುವಿನ ಜವಾಬ್ದಾರಿಗಳನ್ನು ಅವರ ಪತ್ನಿ ಅಶ್ಚಿನಿ ಪುನೀತ್‌ ರಾಜಕುಮಾರ್ ತೆಗೆದುಕೊಂಡಿದ್ದಾರೆ. ಸಿನಿಮಾ ನಿರ್ಮಾಣ, ಸಾಮಾಜಿಕ ಕಾರ್ಯ ಸೇರಿದಂತೆ ಅಶ್ವಿನಿ ಅವರೇ ಮುಂದೆ ನಿಂತು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಇದೀಗ ಸಾಕಷ್ಟು ಒತ್ತಡದ ನಡುವೆಯೂ ಅಶ್ವಿನಿ ಅವರು ಜಿಮ್‌ನಲ್ಲಿ ಪುನೀತ್‌ ರೀತಿ ವರ್ಕೌಟ್ ಮಾಡಿ ಗಮನ ಸೆಳೆದಿದ್ದಾರೆ.

ಅಶ್ವಿನಿ ಅವರದ್ದು ಎನ್ನಲಾದ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಡಾ. ಪುನೀತ್‌ ರಾಜಕುಮಾರ್ ಫ್ಯಾನಿಸಂ ಪೇಜ್‌ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ಅಶ್ವಿನಿ ಅವರು ವರ್ಕ್‌ಔಟ್ ಮಾಡುತ್ತಿರುವ ವಿಡಿಯೊಗೆ ಯುವರತ್ನ ಸಿನಿಮಾದ ‘ಫೀಲ್ ದಿ ಪವರ್’ ಹಾಡನ್ನು ಹಿನ್ನೆಲೆಯಾಗಿ ಬಳಸಲಾಗಿದೆ. ಈ ಬಗ್ಗೆ ಅಶ್ವಿನಿ ಅವರು ತಮಗೆ ಸಂಬಂಧಿಸಿದ ಯಾವುದೇ ಸಾಮಾಜಿಕ ಖಾತೆಗಳಲ್ಲಿ ವಿಡಿಯೊ ಹಂಚಿಕೊಂಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT