ಶರಣ್ ಅಭಿನಯದ ‘ಅವತಾರ ಪುರುಷ–2’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ‘ರಾಮನ ಅವತಾರ’ವೆತ್ತಲು ಸಿದ್ಧವಾಗಿರುವ ರಿಷಿ ಅತಿಥಿಯಾಗಿ ಬಂದಿದ್ದರು. ಈ ವೇಳೆ ಮಾತನಾಡಿದ ಶರಣ್, ‘ಇತ್ತೀಚಿನ ದಿವಸಗಳಲ್ಲಿ ಕಾಮಿಡಿ ಎಂಬ ವಿಚಾರ ಬಂದಾಗ, ಅದ್ಭುತವಾದ ಕಾಮಿಡಿ ಟೈಮಿಂಗ್ ಹಾಗೂ ಹಾಸ್ಯಪ್ರಜ್ಞೆಯುಳ್ಳ ನಾಯಕ ನಟರಲ್ಲಿ ರಿಷಿ ಒಬ್ಬರು. ನಾವಿಬ್ಬರೂ ಒಂದೆರಡು ಪ್ರಾಜೆಕ್ಟ್ಗಳಲ್ಲಿ ಜೊತೆಯಾಗಿ ನಟಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಮೊನ್ನೆ ಸಿಂಪಲ್ ಸುನಿ ಬಂದಿದ್ದಾಗ, ‘ಆಪರೇಷನ್ ಅಲಮೇಲಮ್ಮ’ ರೀತಿಯ ಸ್ಕ್ರಿಪ್ಟ್ ಮಾಡಿ. ನಾವಿಬ್ಬರೂ ಕೆಲಸ ಮಾಡೋಣ’ ಎಂದಿದ್ದೆ. ಯಾರ ಜೊತೆ ಡ್ಯುಯಲ್ ಹೀರೊ ಆಗಿ ನಟಿಸಬೇಕು ಎಂದು ಕೇಳಿದರೆ, ನಾನು ರಿಷಿ ಹೆಸರನ್ನೇ ಹೇಳುತ್ತೇನೆ. ಒಂದೊಳ್ಳೆಯ ಸ್ಕ್ರಿಪ್ಟ್ ನಮಗಿಬ್ಬರಿಗೂ ಬರಲಿ’ ಎಂದರು.