ಲಾಸ್ ಏಂಜಲೀಸ್: ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸುತ್ತಿದಂತೆ ಎಸ್.ಎಸ್ ರಾಜಮೌಳಿ ಖುಷಿಯಿಂದ ತಮ್ಮ ಪತ್ನಿಯನ್ನು ತಬ್ಬಿಕೊಂಡು ಸಂಭ್ರಮಿಸಿದ್ದಾರೆ.
ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
95ನೇ ಆಸ್ಕರ್‌ನಲ್ಲಿ ‘ನಾಟು ನಾಟು‘ ಹಾಡಿಗೆ ಅತ್ಯುತ್ತಮ ಗೀತೆ ಪ್ರಶಸ್ತಿ ಸಿಕ್ಕಿದೆ.
‘ಲೇಡಿ ಗಾಗಾ’, ‘ಡಯೇನ್ ವಾರೆನ್’ ಮತ್ತು ‘ರಿಹಾನ್ನಾ’, ಟೆಲ್ ಇಟ್ ಲೈಕ್ ಎ ವುಮನ್ ಚಿತ್ರದ 'ಚಪ್ಪಾಳೆ', 'ಟಾಪ್ ಗನ್: ಮೇವರಿಕ್' ಚಿತ್ರದಿಂದ 'ಹೋಲ್ಡ್ ಮೈ ಹ್ಯಾಂಡ್', 'ಬ್ಲ್ಯಾಕ್ ಪ್ಯಾಂಥರ್: ವಕಾಂಡ ಫಾರೆವರ್' ನಿಂದ 'ಲಿಫ್ಟ್ ಮಿ ಅಪ್', 'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಸಿನಿಮಾದಿಂದ 'ದಿಸ್ ಈಸ್ ಎ ಲೈಫ್' ಹಾಡುಗಳ ವಿರುದ್ಧ ಸ್ಪರ್ಧಿಸಿ, ನಾಟು ನಾಟು ಹಾಡು ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ.
ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದರು.
'ನಾಟು ನಾಟು' ಈ ವರ್ಷ ಗೋಲ್ಡನ್ ಗ್ಲೋಬ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಯನ್ನೂ ಗೆದ್ದಿದೆ.
ಆರ್.ಆರ್.ಆರ್ ಚಿತ್ರದಲ್ಲಿ ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಮತ್ತು ಶ್ರೇಯಾ ಸರನ್ ನಟಿಸಿದ್ದಾರೆ.
ಚಿತ್ರದಲ್ಲಿ ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ, ಬ್ರಿಟಿಷರ ವಿರುದ್ಧದ ಹೋರಾಟದ ಕಾಲ್ಪನಿಕ ಕಥೆ ಹಂದರ ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.